ಗಾಂಜಾ ಮಾರುತ್ತಿದ್ದ ಮಹಿಳೆ ಬಂಧನ

Ganja
Published on

ಕಲಬುರಗಿ: ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾಳಿ ಮಾಡಿದ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿ ೧.೮೧೪ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನೀಲಾಬಾಯಿ ವಾಡಿ ಬಂಧಿತ ಆರೋಪಿ. ಟಿನ್ ಶೆಡ್ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾದ ಹೂವು, ಬೀಜ ಮತ್ತು ಎಲೆಗಳಿಂದ ಕೂಡಿದ್ದ ಒಂದು ಕೆಜಿ ೮೦೦ ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬಂಧಿತಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಜಂಟಿ ಆಯುಕ್ತ ನರ‍್ದೇಶನದಂತೆ ಉಪ ಅಧೀಕ್ಷಕ ದೊಡ್ಡಪ್ಪ ಹೆಬಳೆ ನೇತೃತ್ವದಲ್ಲಿ ನಿರೀಕ್ಷಕ ನರೇಂದ್ರ, ಉಪ ನಿರೀಕ್ಷಕಿ ರಾಚಮ್ಮ, ಸಿಬ್ಬಂದಿ ಮೊಹ್ಮದ್ ಮುಬಿನ್, ವಸಂತಕುಮಾರ ಅವರ ತಂಡ ಕರ‍್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net