ಗಮನ ಸೆಳೆದ ಮೆರವಣಿಗೆ

bkt-12-9
ಅಂಜುಮನ್ ಸಂಸ್ಥೆಯ ಸೀರತ್ ಸಮಿತಿ ನೇತೃತ್ವದಲ್ಲಿ ಹಳೇ ಬಾಗಲಕೋಟೆ ನಗರದಲ್ಲಿ ಬುಧವಾರ ಮುಸ್ಲಿಂ ಬಾಂಧವರಿಂದ ಬೃಹತ್ ಮೆರವಣಿಗೆ ನಡೆಯಿತು.
Published on

ಬಾಗಲಕೋಟೆ: ಮಹ್ಮದ ಪೈಗಂಬರ ಜಯಂತಿ ನಿಮಿತ್ಯ ಅಂಜುಮನ್ ಸಂಸ್ಥೆಯ ಸೀರತ್ ಸಮಿತಿ ನೇತೃತ್ವದಲ್ಲಿ ಹಳೇ ಬಾಗಲಕೋಟೆ ನಗರದಲ್ಲಿ ಬುಧವಾರ ಮುಸ್ಲಿಂ ಬಾಂಧವರಿಂದ ಬೃಹತ್ ಮೆರವಣಿಗೆ ನಡೆಯಿತು.
ಅಂಜುಮನ್ ಸಂಸ್ಥೆಯ ಆವರಣದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹಸಿರು ಧ್ವಜ, ಅಶ್ವಾರೋಹಿಗಳು ಆಕರ್ಷಕವಾಗಿತ್ತು. ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಮೊಳಗಿತು. ವರುಣ ಆರ್ಭಟದ ನಡುವೆಯೂ ಜನ ಸಮೂಹ ಸೇರಿತ್ತು. ಹಲವಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರಿದ್ದರು. ದಲಿತ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಾಜಿ ಸಚಿವ ಎಚ್.ವೈ.ಮೇಟಿ ಮೆರವಣಿಗೆ ವೀಕ್ಷಣೆ ಮಾಡಿ ಈದ್ ಮಿಲಾದ್ ಶುಭಕೋರಿದರು. ಎಲ್ಲೆಡೆ ಪೊಲೀಸ್ ಬಂದೋ ಬಸ್ತ ಏರ್ಪಡಿಸಲಾಗಿತ್ತು. ಸಂಜೆ ವರೆಗೂ ಮೆರವಣಿಗೆ ನಡೆದು ನಂತರ ಸಭೆಯಾಗಿ ಮಾರ್ಪಟ್ಟಿತ್ತು. ಮಹಮ್ಮದಗೌಸ ಖಾಜಿ, ಅಬ್ದುಲ ಗಫಾರ ಕೊರ್ತಿ, ರಾಜಮಹಮ್ಮದ ಬದಾಮಿ, ಅಯ್ಯೂಬಖಾನ್ ಬಾಗೇವಾಡಿ, ಮಹಮ್ಮದ ಹಸಿಮ್ ಜಮಾದಾರ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net