ಗಮನ ಸೆಳೆದ ಕುಸ್ತಿ ಪಂದ್ಯಾವಳಿ

RBK-25-3
ಬನಹಟ್ಟಿಯ ಮಲ್ಲಿಕಾರ್ಜುನ ದೇವರ ಜಾತ್ರೆಯ ನಿಮಿತ್ತ ಅಶೋಕ ಕಾಲೋನಿಯಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಪೈಲ್ವಾನರ ಕುಸ್ತಿ ಝಲಕ್.
Published on

ಬಾಗಲಕೋಟೆ: ಜಿಲ್ಲೆಯ ಬನಹಟ್ಟಿ ನಗರದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ರಾಷ್ಟçಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಗಳು ಪ್ರೇಕ್ಷಕರ ಗಮನ ಸೆಳೆದವು.

ಸಂಜೆ ೩ ಗಂಟೆಗೆ ಪ್ರಾರಂಭಗೊ0ಡ ಕುಸ್ತಿಗಳು ರಾತ್ರಿ ೮.೩೦ ರವರೆಗೆ ನಡೆದವು. ಕುಸ್ತಿ ಪ್ರಿಯರ ಚಪ್ಪಾಳೆ, ಶಿಳ್ಳೆಗಳು ಮುಗಿಲು ಮುಟ್ಟಿದ್ದವು. ಗ್ರಾಮೀಣ ಸೊಗಡಿನ ಕ್ರೀಡಾಕೂಟಕ್ಕೆ ಜನರು ಮನಸೋತರು.

ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಚೇರಮನ್ ಮಲ್ಲಿಕಾರ್ಜುನ ತುಂಗಳ, ಕುಸ್ತಿ ಕಮಿಟಿ ಮುಖಂಡ ಬ್ರಿಜ್‌ಮೋಹನ ಡಾಗಾ ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಭೀಮಶಿ ಮಗದುಮ್ ಮಾತನಾಡಿ, ಕುಸ್ತಿ ಪಂದ್ಯಗಳೂ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ದೇಸಿ ಕ್ರೀಡೆಯಾದ ಕುಸ್ತಿಗೆ ಮತ್ತು ಪೈಲ್ವಾನರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಸುಸಜ್ಜೀತವಾದ ಗರಡಿ ಮನೆಗಳ ನಿರ್ಮಾಣ ಕೂಡಾ ಅಗತ್ಯವಾಗಿದೆ ಎಂದರು.

೫೧ ಕುಸ್ತಿ ಜೋಡಿಗಳು ಇಲ್ಲಿ ತಮ್ಮ ಕಲೆಗಳನ್ನು ಪ್ರದರ್ಶನ ಮಾಡಿದವು. ದಾವನಗೆರೆಯ ಕಾರ್ತಿಕ ಕಾಟೆ ಪೈಲ್ವಾನ, ಸೊಲ್ಲಾಪುರ ವಿಕಾಸ ಧೋತ್ರೆ ಅವರನ್ನು ಕೆಲವೇ ಸಮಯದಲ್ಲಿ ಚಿತ್ ಮಾಡಿದರೆ, ಇಂಚಲಕರಜಿಯ ಪ್ರಶಾಂತ ಜಗತಾಪ ಪೈಲ್ವಾನ್‌ರು ಕಂಗ್ರಾಳೆಯ ಕಾಮೇಶ ಪೈಲ್ವಾನರನ್ನು ಚಿತ್ ಮಾಡಲು ಬಹಳ ಸಮಯ ತೆಗೆದುಕೊಂಡರು. ಇದೇ ಸಂದರ್ಭ ಮಹಿಳಾ ಕುಸ್ತಿಗಳು ಗಮನ ಸೆಳೆದವು.

ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ, ಖ್ಯಾತ ಜ್ಯೋತಿಷಿ ಶಂಕರ ಗುರೂಜಿ, ವಿದ್ಯಾಧರ ಸವದಿ, ಶಿವು ಗುಂಡಿ, ದಾನಪ್ಪ ಹುಲಜತ್ತಿ, ಶ್ರೀಶೈಲ ದಬಾಡಿ, ಸಿದ್ಧನಗೌಡ ಪಾಟೀಲ, ಪ್ರಶಾಂತ ಕೊಳಕಿ, ಶ್ರೀಶೈಲ ಬೀಳಗಿ, ಜಯವಂತ ಮಿಳ್ಳಿ, ಶಂಕರ ಜಾಲಿಗಿಡದ, ಸುರೇಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net