

ಕಲಬುರಗಿ: ಗಣೇಶ ಚತುರ್ಥಿ ಹಿಂದೂ ಧರ್ಮದ ಪ್ರಮುಖ ಹಬ್ಬ. ಇದನ್ನು ವಿದೇಶದಲ್ಲಿ ಆಚರಿಸುವುದು ನೋಡಿದರೆ ಭಾರತ ಇಡೀ ವಿಶ್ವದಲ್ಲೇ ಸಂಸ್ಕೃತಿ ಹಾಗೂ ಸನಾತನ ಪದ್ದತಿಗೆ ಗುರುವಿನ ಸ್ಥಾನ ಪಡೆಯಲಿದೆ ಎಂದು ಅಖಿಲ ಕರ್ನಾಟಕ ವೀರಶೈವ ಅರ್ಚಕ, ಪುರೋಹಿತರ ಸಂಘಧ ಕಾರ್ಯಾಧ್ಯಕ್ಷ ಡಾ.ಬಸವರಾಜ ಕಲಗುರ್ತಿಮಠ್ ಗುರೂಜಿ ಹೇಳಿದರು.
ನಗರದ ವಿದ್ಯಾನಗರದಲ್ಲಿ ಬುಧವಾರ ಆಯೋಜಿಸಿದ್ದ ಮಲ್ಲಿಕಾರ್ಜುನ ತರುಣ ಸಂಘದ ೨೫ನೇ ವಾರ್ಷಿಕೋತ್ಸವ ಹಾಗೂ ಗಣೇಶ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಈ ಹಬ್ಬ ಜನರ ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಶುಭ ಫಲಕ್ಕಾಗಿ ಆಚರಿಸುತ್ತಾರೆ. ಎಲ್ಲಾ ಪೂಜೆಗಳಲ್ಲಿ ಗಣೇಶನ ಪೂಜೆಗೆ ಅಗ್ರ ಸ್ಥಾನ. ಧಾರ್ಮಿಕ ಶುಭ ಕಾರ್ಯಗಳಲ್ಲಿ ಗಣೇಶನ ಪೂಜೆ ನಂತರವೇ ಎಲ್ಲಾ ದೇವತೆಗಳ ಪೂಜೆ ನೆರವೇರುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದ್ದರು. ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ತರುಣ ಸಂಘದ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಕಾರ್ಯದರ್ಶಿ ಕರಣ ಆಂದೋಲಾ ಇದ್ದರು.
ಹಿರಿಯರಾದ ಬಸವಂತರಾವ್ ಜಾಬಶೆಟ್ಟಿ, ವಿಶ್ವನಾಥ ರಟಕಲ್, ಶಾಂತಯ್ಯ ಬೀದಿಮನಿ, ರೇವಣಸಿದ್ದಪ್ಪ ಜೀವಣಗಿ, ಸಂಗಮೇಶ ದಿವಟಗಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಸಂಘದ ಪದಾಧಿಕಾರಿಗಳಾದ ಶಶಿಧರ ಪ್ಯಾಟಿ, ಸಂಜು ತಂಬಾಕೆ, ಸಂಗಮೇಶ ಹೆಬ್ಬಾಳ, ಶಿವರಾಜ ಕೋಳಕೂರ್, ವಿಕಾಸ ತೊರವಿ, ಹರ್ಷ ಪಾಟೀಲ್, ಅಮಿತ್ ಸಿಕೇದ್, ಲಿಂಗರಾಜ ಕಾಳೆ, ಅನಿಲ್ ನಾಗೂರ, ವಿಶ್ವನಾಥ ಮಠಪತಿ ಇತರರು ಇದ್ದರು.