ಬಾಗಲಕೋಟೆ: ನಾವೆಲ್ಲ ನೋಡುವ ವಿಘ್ನ ವಿನಾಶಕ ಗಣೇಶನ ಹೊಟ್ಟೆಗೆ ನಾಗರ ಹಾವು ಸುತ್ತಿಕೊಂಡಿರುತ್ತದೆ. ಇಲ್ಲೊಂದು ಕಡೆಗೆ ನಿಜ ನಾಗರಹಾವು ಒಂದು ಗಣೇಶನ ಪ್ರೋಟೋ ಪ್ರೇಮ್ ನಲ್ಲಿ ಅವಿತು ಕುಳಿತಿದ್ದು ಕಂಡು ಬಂದಿದೆ.
ವಿದ್ಯಾಗಿರಿಯ ಕೊಣ್ಣೂರಮಠದ ಹಿಂಬದಿಯ ಮನೆಯೊಂದರಲ್ಲಿ ಪೋಟೋ ಪ್ರೇಮ್‌ನಲ್ಲಿ ಅವಿತುಕೊಂಡಿದ್ದ ಬುಸ್ ಬುಸ್ ನಾಗಪ್ಪನನ್ನು ಉರುಗ ರಕ್ಷಕ ಸ್ನೇಕ ರಾಜು ಅವರು ರಕ್ಷಣೆ ಮಾಡಿದ್ದಾರೆ.
ಬುಧವಾರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು ಅಲ್ಲಿದ್ದ ಗಣೇಶನ ಫೋಟೋ ಪ್ರೇಮ್ನ ಹಿಂಭಾಗದಲ್ಲಿ ಹೋಗಿದೆ. ಇದನ್ನು ಕಂಡು ಮನೆಯವರು ಗಾಬರಿ ಆಗಿದ್ದರು. ತಕ್ಷಣ ಸ್ನೇಕ್ ರಾಜು ಅವರನ್ನು ಕರೆಸಿದ್ದಾರೆ. ಫೋಟೋ ತೆಗೆದು ನೋಡಿದಾಗ ಹಾವು ಕಂಡು ಬಂದಿಲ್ಲ. ಪೋಟೋ ಪ್ರೇಮ್ ನಲ್ಲಿ ಇದೆ ಎಂದು ಗೊತ್ತಾಗಿದೆ. ಬಳಿಕ ರಾಜು ಅವರು ಹಾವು ಹಿಡಿದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಇದರಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.