ಗಣೇಶ ದೇವಸ್ಥಾನದಲ್ಲಿ ಮಾತ್ರ ಅವಕಾಶ

8HLY-1
Published on

ಹಳಿಯಾಳ: ಪಟ್ಟಣದ ಶ್ರೀಗಣೇಶ ದೇವಸ್ಥಾನ ಹೊರತಾಗಿ ತಾಲೂಕಿನಲ್ಲಿ ಮತ್ತಾವದೇ ದೇವಸ್ಥಾನಗಳ ಬಾಗಿಲುಗಳನ್ನು ತೆರೆಯಲಿಲ್ಲ.

ಬೆಳಗಾವಿ ರಸ್ತೆಯಲ್ಲಿರುವ ಶ್ರೀಗಣೇಶ ದೇವಸ್ಥಾನದಲ್ಲಿ ಸೋಮವಾರ ಸಂಕಷ್ಟಿಯ ನಿಮಿತ್ತ ಬೆಳಗ್ಗಿನಿಂದ ಹನ್ನೊಂದು ಗಂಟೆಯವರೆಗೆ ಬಾಗಿಲು ತೆರೆದು ಸಾರ್ವಜನಿಕರಿಗಾಗಿ ದರ್ಶನ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರದ ನಿಬಂಧನೆಯಂತೆ ದೇವಸ್ಥಾನಕ್ಕೆ ಪ್ರವೇಶಿಸಲು ಮತ್ತು ಹೊರ ಹೋಗಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀ ತುಳಜಾ ಭವಾನಿ ದೇವಸ್ಥಾನ ಸರ್ಕಾರದ ಆದೇಶ ಪ್ರತಿ ಬಂದ ನಂತರ ತೆರೆಯಲು ತೀರ್ವನಿಸಲಾಗಿದೆ. ಶ್ರೀಗ್ರಾಮದೇವಿ ದೇವಸ್ಥಾನ ತೆರೆಯುವ ಮುನ್ನ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ರ್ಚಚಿಸಲು ಮಂಗಳವಾರ ಆಡಳಿತ ಮಂಡಳಿಯ ಸಭೆ ಕರೆಯಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಮಂಡಳಿ ಅಧ್ಯಕ್ಷ ಮಂಗೇಶ ದೇಶಪಾಂಡೆ ಹೇಳಿದ್ದಾರೆ.

ಚರ್ಚ್, ಮಸೀದಿ ತಡ: ಹಳಿಯಾಳ ತಾಲೂಕಿನಲ್ಲಿರುವ ಚರ್ಚ್​ಗಳಲ್ಲಿ ಜೂನ್ 13ರಿಂದ ಪೂಜಾ ವಿಧಿಗಳನ್ನು ಆರಂಭಿಸಲು ಯೋಜಿಸಲಾಗಿದೆ. ಸರ್ಕಾರದ ನಿಬಂಧನೆಗಳಂತೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ರ್ಚಚಿಸಲು ಚರ್ಚ್ ಆಡಳಿತ ಮಂಡಳಿಯ ಸಭೆಯು ನಡೆಯಿತು. ಮಸೀದಿಗಳಲ್ಲಿಯೂ ಸರ್ಕಾರ ಸೂಚಿಸಿದ ನಿಬಂಧನೆಗಳಂತೆ ಎಲ್ಲ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಸುತ್ತೋಲೆಯನ್ನು ಕಳಿಸುವುದಾಗಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲಿಂ ಬಸರಿಕಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net