ಗಣಪತಿಗೆ ಕಣ್ಣು ಬರೆದ ಕಲಾವಿದ

19Hnp1
Published on

ಹೊಳೆನರಸೀಪುರ: ಪಟ್ಟಣದ ಮಹಾಗಣಪತಿ ಪೆಂಡಾಲ್ ವೇದಿಕೆಯಲ್ಲಿ 8 ಅಡಿ ಎತ್ತರದ ಜೇಡಿ ಮಣ್ಣಿನ ಗಣಪತಿ ನಿರ್ಮಿಸಿದ್ದು, ಸೋಮವಾರ ಬೆಳಗ್ಗೆ ಗಣೇಶನ ಮೂರ್ತಿಯ ಮುಂಭಾಗ ಬಾಳೆಕಂದು ನೆಟ್ಟು, ಅದರ ಮುಂದೆ ಕನ್ನಡಿ ಇಡಲಾಗಿತ್ತು. ಕಲಾವಿದ ಸತೀಶ ಅವರು ಅರ್ಚಕ ಶ್ರೀಶಾಚಾರ್ ಪೌರೋಹಿತ್ಯದಲ್ಲಿ ಗಣೇಶ ಮೂರ್ತಿಗೆ ಕಣ್ಣು ಬರೆಯುತ್ತಿದ್ದಂತೆ ಪರದೆ ಸರಿಸಿ, ಬಾಳೆಕಂದು ಕತ್ತರಿಸಿ ಮೊದಲು ಕನ್ನಡಿಯಲ್ಲಿ ಗಣೇಶನನ್ನು ತೋರಿಸಿ ನಂತರ ಸಾರ್ವಜನಿಕರಿಗೆ ಮೂಲ ಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.


ಶಾಸಕ ರೇವಣ್ಣ ಆಗಮಿಸುತ್ತಿದ್ದಂತೆ ಗಣೇಶನ ಬೆಳ್ಳಿ ವಿಗ್ರಹಕ್ಕೆ ಪಂಚಾಮೃತಾಭಿಷೇಕ ನೆರವೇರಿಸಿ ಪೂಜಿಸಿ ಮಹಾಮಂಗಳಾರತಿ ಮಾಡಿ ತೀರ್ಥ, ಮೋದಕ ಹಾಗೂ ಕಡ್ಲೇಹಿಟ್ಟು ಪ್ರಸಾದ ನೀಡಿದರು.


ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಹಾಗೂ ಸದಸ್ಯರು ಶಾಸಕ ಎಚ್.ಡಿ. ರೇವಣ್ಣ ಹಾಗೂ ಮೈಸೂರಿನ ಡಿವೈಎಸ್ಪಿ ಲಕ್ಷ್ಮೇಗೌಡರನ್ನು ಸನ್ಮಾನಿಸಿ ಗೌರವಿಸಿದರು.


ನಂತರ ಸಮಿತಿಯ ಸದಸ್ಯರೊಂದಿಗೆ ಮಾತನಾಡಿದ ಶಾಸಕ ಎಚ್.ಡಿ.ರೇವಣ್ಣ, ಗಣಪತಿ ಬಿಡುವ ದಿನದವರೆಗೂ ಸಮಿತಿಯ ಸದಸ್ಯರೆಲ್ಲ ಭಾಗವಹಿಸಿ ಗಣೇಶೋತ್ಸವವನ್ನು ಯಶಸ್ವಿಗೊಳಿಸಿ. ನಾನು ಗಣೇಶೋತ್ಸವಕ್ಕೆ 5 ಲಕ್ಷ ರೂ. ನೀಡುತ್ತೇನೆ ಎಂದು ತಿಳಿಸಿದರು.

ಸಮಿತಿಯ ಕಾರ್ಯದರ್ಶಿ ವೈ.ವಿ. ಚಂದ್ರಶೇಖರ್, ಖಜಾಂಚಿ ಎಸ್.ಗೋಕುಲ್, ಎಚ್.ಎಸ್. ಸುದರ್ಶನ್, ಸಮಿತಿಯ ಸದಸ್ಯರಾದ ಎ. ಜಗನ್ನಾಥ್, ಎ.ಆರ್. ರವಿಕುಮಾರ್, ಮುರಳೀಧರ ಗುಪ್ತಾ, ದೊಡ್ಡಮಲ್ಲೇಗೌಡ, ಆರ್.ಬಿ. ಪುಟ್ಟೇಗೌಡ, ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಸುರೇಶ್‌ಕುಮಾರ್, ಉಪಾಧ್ಯಕ್ಷ ಎನ್.ಎಸ್.ರಾಧಾಕೃಷ್ಣ. ಎಚ್.ವಿ.ರವಿಕುಮಾರ್, ಎಚ್.ಟಿ. ಸುದರ್ಶನ್, ಪುರಸಭೆ ಮಾಜಿ ಅಧ್ಯಕ್ಷರಾದ ಲಕ್ಷ್ಮಣ, ಸುಧಾ, ನಳಿನಿ, ಉಪಾಧ್ಯಕ್ಷೆ ತ್ರಿಲೋಚನಾ, ಆರ್.ಕೆ. ಗುರುರಾಜ್, ನರಸಿಂಹಶೆಟ್ಟಿ, ಶಿವಕುಮಾರ್, ನಿವೃತ್ತ ಶಿಕ್ಷಕ ಚೆನ್ನೇಗೌಡ, ಮಂಜೇಗೌಡ, ನಿವೃತ್ತ ಯೋಧ ಈಶ್ವರ್, ಎಲೆಕ್ಟ್ರಿಕಲ್ ಲೋಕಿ, ಸ್ಟುಡಿಯೋ ಅಶೋಕ್, ಶಂಕರ್ನಾರಾಯಣ್ ಐತಾಳ್, ಮಹೇಶ್, ಸೊಪ್ಪಿನ ಶಿವಣ್ಣ, ಕಾದಲನ್ ಕೃಷ್ಣ, ಚಂದ್ರಶೇಖರ್, ಕೆಂಪೇಗೌಡ, ಮಿಲ್ಟ್ರಿ ಮಂಜುನಾಥ್, ಇತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾಗಣಪತಿ ಪೆಂಡಾಲಿನಲ್ಲಿ ಸೋಮವಾರ 66ನೇ ವರ್ಷದ ಗಣೇಶೋತ್ಸವಕ್ಕೆ ಶಾಸಕ ಎಚ್.ಡಿ.ರೇವಣ್ಣ ಚಾಲನೆ ನೀಡಿದರು.
ಸಮಿತಿ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ವೈ.ವಿ.ಚಂದ್ರಶೇಖರ್, ಎಸ್.ಗೋಕುಲ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಉಪಾಧ್ಯಕ್ಷ ರಾಧಾಕೃಷ್ಣ, ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net