ಗಣಪತಿ ವಿಸರ್ಜಿಸಿದ ಹಿಂದು-ಮುಸ್ಲಿಮರು

23M.D.R.3
Published on

ಮದ್ದೂರು: ಕೊಪ್ಪ ಗ್ರಾಮದ 4ನೇ ವಾರ್ಡ್ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀವಿನಾಯಕ ಮೂರ್ತಿಯನ್ನು ಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಿಂದು ಹಾಗೂ ಮುಸಲ್ಮಾನರು ಜತೆಯಾಗಿ ಮೆರವಣಿಗೆ ಮಾಡುವ ಮೂಲಕ ಶುಕ್ರವಾರ ವಿಸರ್ಜನೆ ಮಾಡಲಾಯಿತು.


ಹಿಂದು ಹಾಗೂ ಮುಸಲ್ಮಾನರು ಜತೆಗೂಡಿ ಭಾರತೀಯರು ನಾವೆಲ್ಲರೂ ಒಂದು ಎನ್ನುವ ಸಂದೇಶ ಸಾರುತ್ತ ಶ್ರೀವಿನಾಯಕ ಮೂರ್ತಿಯ ವಿಸರ್ಜನೆ ಮಾಡಿ ಸಂಭ್ರಮಿಸಿದರು.


ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಪರ್ವಿಜ್ ಅಹಮದ್ ಮಾತನಾಡಿ, ಸುಮಾರು 23 ವರ್ಷಗಳಿಂದ ಶ್ರೀವಿನಾಯಕರ ಗೆಳೆಯರ ಬಳಗದ ವತಿಯಿಂದ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿದ್ದು, ಈ ವೇಳೆ ಕೊಪ್ಪ ಗ್ರಾಮದ ಎಲ್ಲ ಹಿಂದು ಹಾಗೂ ಮುಸ್ಲಿಮರು ಸೇರಿ ಗಣೇಶನ ವಿಸರ್ಜನೆ ಮಾಡುವುದು ವಿಶೇಷವಾಗಿದೆ ಎಂದರು.


ಗ್ರಾಪಂ ಮಾಜಿ ಸದಸ್ಯ ಕೆ.ರಮೇಶ್, ಮುಖಂಡರಾದ ಶ್ರೀನಿವಾಸ್, ಬೋರಯ್ಯ, ವಿಯನ್, ಶಿವಪ್ರಸಾದ್, ಕೆ.ಶ್ರೀನಿವಾಸ್, ಟಿ.ಜಿ.ಬೋರಯ್ಯ, ಕೆ.ಎಸ್.ವಿನಯ್, ಅಜಿತ್, ರಾಜೇಶ್, ಲಿಖಿತ್, ಲಕ್ಷ್ಮಿಪ್ರಸಾದ್, ದೇವರಾಜು, ಸಂತು, ಇಮ್ರಾನ್ ಹಾಗೂ ಶ್ರೀವಿನಾಯಕ ಗೆಳೆಯರ ಬಳದ ಯುವಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net