ಗಣತಿದಾರರು ಮನೆಗೆ ಬಂದಾಗ ಅಗತ್ಯ ಮಾಹಿತಿ ಒದಗಿಸಿ

bkt-3-5
ಬಾಗಲಕೋಟೆ ನಗರದ ಪ್ರೇಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ)ಹರಳಯ್ಯ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ ಮಾತನಾಡಿದರು. ಮುಖಂಡರಾದ ಜಿಲ್ಲಾಧ್ಯಕ್ಷ ಪ್ರಶಾಂತ ಹೊಸಮನಿ, ಯಲ್ಲಪ್ಪ ಸನಕ್ಯಾನವರ, ಡಿ.ಡಿ.ಸನಕ್ಯಾನವರ, ಬಸವರಾಜ ರಾಜಾಪೂರ, ಸುರೇಶ ಕಾಂಬಳೆ, ಪರಶುರಾಮ ಹೊನಕೇರಿ ಇತರರು ಇದ್ದರು.
Published on

ಬಾಗಲಕೋಟೆ: ಜಾತಿಗಣತಿಗೆ ಗಣತಿದಾರರು ಮನೆಗೆ ಬಂದಾಗ ಅಗತ್ಯ ದಾಖಲೆ ಮತ್ತು ಮೂಲ ಉದ್ಯೋಗ, ಜಾತಿ, ಮನೆಯ ಸದಸ್ಯರ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ)ಹರಳಯ್ಯ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ ಹೇಳಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಮುಂದಿನ ಪೀಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹಾಗೂ ಮೀಸಲಾತಿ ಹಕ್ಕು ಪಡೆಯಬೇಕಾಗಿದೆ. ಸರ್ಕಾರ ಮೇ.೫ ರಿಂದ ೨೩ ರವರೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಽÃಶ ಎಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಜಾತಿ ಜನಗಣತಿ ನಡೆಯಲಿದೆ. ಜಾತಿ ಜನಗಣತಿಗೆ ಗಣತಿದಾರರು ಮನೆಗೆ ಬಂದು ಮಾಹಿತಿ ಪಡೆಯಲಿದ್ದಾರೆ. ಸಮುದಾಯದವರು ಜಾಗೃತೆಯಿಂದ ದಾಖಲೆ, ಜಾತಿಯನ್ನು ಸರಿಯಾಗಿ ನಮೂದಿಸಬೇಕು ಎಂದು ಹೇಳಿದರು.

ಜಾತಿ ಸಮಗಾರ ಇದ್ದು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಕ್ರಮ ಸಂಖ್ಯೆ ೯೩ ಇದ್ದು, ಸಮೀಕ್ಷೆಗೆ ಬಂದಾಗ ಇವುಗಳನ್ನು ಸರಿಯಾಗಿ ನಮೂದಿಸಬೇಕು. ಮೂಲ ಕಸಬು ಚಮ್ಮಾರಿಕೆ(ಪಾದರಕ್ಷೆ ತಯಾರಿಕೆ) ಎಂದು ನಮೂದಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ೧೮ ರಿಂದ ೨೦ ಲಕ್ಷ ಜನಸಂಖ್ಯೆ ಹೊಂದಿದ್ದು, ಜಿಲ್ಲೆಯಲ್ಲಿ ೫೦ ರಿಂದ ೬೦ ಸಾವಿರ ಜನಸಂಖ್ಯೆಯ ಇದ್ದು, ಸರ್ಕಾರ ಜಾತಿ ಜನಗಣತಿ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ದೊರೆಯಬೇಕು. ಮುಂದಿನ ಯುವ ಪೀಳಿಗೆ ಎಲ್ಲ ರಂಗದಲ್ಲಿ ಒಳ್ಳೆಯದಾಗಬೇಕಾಗಿದೆ. ಸಮುದಾಯದವರು ಜಾಗೃತಿ ವಹಿಸಿ ಗಣತಿದಾರರಿಗೆ ಅಗತ್ಯ ಮಾಹಿತಿ ಒದಗಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಲಸಂಗಮದಲ್ಲಿ ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ತಿಗಡಿ ಗ್ರಾಮದಲ್ಲಿ ಇರುವ ಕಲ್ಯಾಣಮ್ಮನವರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಮುಖಂಡರಾದ ಜಿಲ್ಲಾಧ್ಯಕ್ಷ ಪ್ರಶಾಂತ ಹೊಸಮನಿ, ಯಲ್ಲಪ್ಪ ಸನಕ್ಯಾನವರ, ಡಿ.ಡಿ.ಸನಕ್ಯಾನವರ, ಬಸವರಾಜ ರಾಜಾಪೂರ, ಸುರೇಶ ಕಾಂಬಳೆ, ಪರಶುರಾಮ ಹೊನಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net