ಗಟಾರ್ ಹೂಳು ತೆಗೆಯುವ ಕಾರ್ಯ ಶುರು

15sdp1
Published on

ಸಿದ್ದಾಪುರ: ಇಲ್ಲಿನ ಪಟ್ಟಣ ಪಂಚಾಯಿತಿಯು ಮಳೆಗಾಲದ ಪೂರ್ವಸಿದ್ಧತೆ ನಿಮಿತ್ತ ಹೂಳು ತೆಗೆದು ಗಟಾರ್ ಸ್ವಚ್ಛಗೊಳಿಸಲು ಮುಂದಾಗಿದೆ.

ಪಟ್ಟಣ ಪಂಚಾಯಿತಿಯ 15 ವಾರ್ಡ್​ಗಳ ವ್ಯಾಪ್ತಿಯಲ್ಲಿ ಒಟ್ಟು 124 ಕಿ.ಮೀ. ಗಟಾರ್ ಇದೆ. ಇದರಲ್ಲಿ 32 ಕಿ.ಮೀ.ನಷ್ಟು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ಆದರೂ ಇದನ್ನು ಕೂಡ ಪಪಂ ಸ್ವಚ್ಛಗೊಳಿಸುತ್ತಿದೆ. 62 ಕಿ.ಮೀ. ಪಕ್ಕಾ ಹಾಗೂ 30 ಕಿ.ಮೀ. ಕಚ್ಚಾ ಗಟಾರ್ ಇದೆ. ಈಗಾಗಲೇ 30 ಕಿ.ಮೀ.ನಷ್ಟು ಗಟಾರ್​ದಲ್ಲಿ ಹೂಳೆತ್ತಲಾಗಿದೆ.

ಪ್ರತಿವರ್ಷ ಮಳೆಗಾಲ ಆರಂಭವಾದ ಮೇಲೆ ಗಟಾರ್ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರೆ, ಈ ವರ್ಷ ಪಪಂ ಎಚ್ಚೆತ್ತುಕೊಂಡು ಮಳೆಗಾಲದ ಪೂರ್ವದಲ್ಲಿಯೇ ಚರಂಡಿಗಳಲ್ಲಿನ ಹೂಳು ತೆದೆದಿದೆ. ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಅನುಕೂಲ ಮಾಡಿಕೊಡುತ್ತಿದೆ.

ಜೆಸಿಬಿ ಯಂತ್ರದ ಮೂಲಕ ಕಚ್ಚಾ ಗಟಾರ್ ಹಾಗೂ ಪಪಂ ಸಿಬ್ಬಂದಿಯು ಪಕ್ಕಾ ಗಟಾರದ ಹೂಳು ತೆಗೆದು ನಿಗದಿಪಡಿಸಿದ ಸ್ಥಳದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ.

ಗಟಾರದಲ್ಲಿ ಕೊಳಚೆ ನೀರು, ಕೊಳೆತ ಕಸ, ಕಡ್ಡಿ, ಪ್ಲಾಸ್ಟಿಕ್ ತುಂಬಿದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಬಂದರೆ ಹೇಗೆ ಎನ್ನುವ ಆತಂಕದಲ್ಲಿದ್ದ ಜನರು ಈಗ ನಿಟ್ಟುಸಿರು ಬಿಡುವಂತಾಗಿದೆ.

ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಅವಶ್ಯವಿರುವ ರಸ್ತೆಗಳ ಪಕ್ಕದಲ್ಲಿ 7 ಕಡೆ ಕಸದ ತೊಟ್ಟಿಗಳನ್ನು ಇಡಲಾಗುತ್ತದೆ. ಸಾರ್ವಜನಿಕರು ಈ ತೊಟ್ಟಿಯಲ್ಲಿ ಕಸವನ್ನು ಹಾಕಬೇಕು. ಮಳೆಗಾಲದ ಪೂರ್ವದಲ್ಲಿ ಎಲ್ಲ ಗಟಾರಗಳ ಸ್ವಚ್ಛತೆ ಮಾಡಲಾಗುವುದು. | ಕುಮಾರ ನಾಯ್ಕ ಮುಖ್ಯಾಧಿಕಾರಿ ಪಪಂ ಸಿದ್ದಾಪುರ

ಮಳೆಗಾಲದ ಪೂರ್ವ ಸಿದ್ಧತೆಯನ್ನು ಎಲ್ಲ ಇಲಾಖೆಗಳು ಮಾಡಿಕೊಳ್ಳಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಅದರಂತೆ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಗಟಾರ್ ಸ್ವಚ್ಛತೆಗೆ ಪಿಡಿಒ ಹಾಗೂ ಕಾರ್ಯದರ್ಶಿ ಹೆಚ್ಚು ಗಮನ ನೀಡಬೇಕು. ಈ ಕುರಿತು ತಾಪಂ ಇಒಗೆ ಸೂಚನೆ ನೀಡಲಾಗಿದೆ. | ಮಂಜುಳಾ ಎಸ್. ಭಜಂತ್ರಿ ತಹಸೀಲ್ದಾರ್ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net