ಗಂಗಾವಳಿ ನದಿಯಲ್ಲಿ ಮುಳುಗಿದ ವಿದ್ಯಾರ್ಥಿ

27 ylp prakash
Published on

ಯಲ್ಲಾಪುರ(ಉತ್ತರ ಕನ್ನಡ): ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ.  ಗುಳ್ಳಾಪುರ ಪ್ರೌಢಶಾಲೆಯ ಹತ್ತನೇ ತರಗತಿಯ ಪ್ರಕಾಶ ವಿಠ್ಠು ಪಟಕಾರೆ (16) ಮೃತ ವಿದ್ಯಾರ್ಥಿ. ಗುಳ್ಳಾಪುರ ಪ್ರೌಢಶಾಲೆಯ 66 ವಿದ್ಯಾರ್ಥಿಗಳನ್ನು ಸಮೀಪ ಇರುವ ಗಂಗಾವಳಿ ನದಿ ಬಳಿ ಹೊರತುಪಡಿಸಿ ಸಂಚಾರಕ್ಕೆಂದು ಕರೆದೊಯ್ಯಲಾಗಿತ್ತು. ಈ ವೇಳೆ ಪ್ರಕಾಶ ಆಕಸ್ಮಿಕವಾಗಿ ಕಾಣೆಯಾಗಿದ್ದ.   ತಕ್ಷಣ ಸ್ಥಳೀಯರು, ಮೀನುಗಾರರು ದೋಣಿಯ ಮೂಲಕ ಶೋಧ ನಡೆಸಿದ್ದು, ಒಂದು ತಾಸಿನ ಕಾರ್ಯಾಚರಣೆ ಬಳಿಕ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net