ಖಾನಾಪುರದಲ್ಲಿ ಚಿನ್ನಾಭರಣ ಕಳ್ಳತನ ಹೆಚ್ಚಳ

Channagiri, Police, Complaint, Robbery,
Published on

ಖಾನಾಪುರ: ಪಟ್ಟಣದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಬಸ್ ನಿಲ್ದಾಣದಲ್ಲಿ ಭಾನುವಾರ ಮಹಿಳೆಯ ಎಂಟು ತೊಲ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ತಾಲೂಕಿನ ಓಲ್ಮಾನಿಯ ಪ್ರಜ್ಞಾ ಪರುಶುರಾಮ ಚವ್ಹಾಣ ಅವರು ಬೆಳಗಾವಿಯಿಂದ ಪ್ರಯಾಣಿಸಿ ಖಾನಾಪುರ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುತ್ತಿದ್ದ ವೇಳೆ ಅವರ ಬ್ಯಾಗ್‌ನಿಂದ ಚಿನ್ನಾಭರಣ ದೋಚಲಾಗಿದೆ. ಅಲ್ಲದೆ ಕಳೆದ ಶುಕ್ರವಾರ ಖಾನಾಪುರ ಬಸ್ ನಿಲ್ದಾಣದಲ್ಲಿ ಸಣ್ಣಹೊಸೂರಿನ ಮಹಿಳೆ ಸವಿತಾ ಈರಪ್ಪ ಪಾಟೀಲ ಎಂಬುವರು ಬಸ್ ಹತ್ತುತ್ತಿದ್ದ ವೇಳೆ ನಾಲ್ಕೂವರೆ ತೊಲ ಚಿನ್ನಾಭರಣ ಕಳವು ಮಾಡಲಾಗಿದೆ. ಈ ಎರಡು ಪ್ರಕರಣ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net