ಖಣಿಯಲ್ಲಿ ನಿಂತ ನೀರಿನಲ್ಲಿ ಬಿದ್ದು ಬಾಲಕನ ಸಾವು

Published on


ಕಲಬುರಗಿ ನಗರದ  ಹೀರಾಪುರ ಪ್ರದೇಶದ ರಿಂಗ್‌ರೋಡ್‌ಗೆ ಹೊಂದಿಕೊಂಡ ಮಿಸಬಾ ನಗರದಲ್ಲಿನ ಕಣಿಯಲ್ಲಿ ನಿಂತ ನೀರಿನಲ್ಲಿ ಬಿದ್ದು ನಾಲ್ಕು ವರ್ಷದ ಬಾಲಕ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
 ಮೊಹ್ಮದ ನಯಿಮ್ (೪) ಕಣಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಸೋಮವಾರ ಶವ ಪತ್ತೆಯಾಗಿದೆ.
ಭಾನುವಾರ ಸಂಜೆ ಮನೆಯಿಂದ ಆಟವಾಡಿಕೊಂಡು ಹೊರಗೆ ಹೋಗಿದ್ದ ಬಾಲಕ ಮರಳಿ ಬಂದಿರಲಿಲ್ಲ. ಎಲ್ಲಡೆ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಮಳೆಯಿಂದ ಕಣಿಯಲ್ಲಿ ನೀರು ನಿಂತುಕೊAಡು ಅಲ್ಲಿ ಬಾಲಕ  ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ.  ಈ ಕುರಿತು ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net