ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

9mnd2
Published on

ಮುಂಡಗೋಡ: ತಾಲೂಕಿನ ಹಾಗೂ ಯಲ್ಲಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುವುದಾಗಿ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ, ಶ್ರೀ ನಾರಾಯಣಗುರು ಸಭಾಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಇನ್ನು ಒಂದು ವಾರದಲ್ಲಿ ನಿಮಗೆಲ್ಲರಿಗೂ ಸಂತಸದ ಸುದ್ದಿ ಸಿಗಲಿದೆ ಎಂದರು. ಬಾಚಣಕಿ ಗ್ರಾಪಂ ಅಧ್ಯಕ್ಷೆ ತುಳಸವ್ವ ಗವಾಣಿ, ಜಿಪಂ ಸದಸ್ಯ ರವಿಗೌಡ ಪಾಟೀಲ, ಮಲ್ಲಯ್ಯ ನಡುವಿನಮನಿ, ತಾಪಂ ಸದಸ್ಯರಾದ ಜ್ಞಾನದೇವ ಗುಡಿಯಾಳ, ರಮೇಶ ರಾಯ್ಕರ ಮತ್ತು ಗಣಪತಿ ಭೋವಿವಡ್ಡರ, ಮುಖಂಡರಾದ ಗುಡ್ಡಪ್ಪ ಕಾತೂರ, ಸಿ.ಕೆ. ಅಶೋಕ, ಕೆಂಜೋಡಿ ಗಲಬಿ, ಶಿವಾಜಪ್ಪ ಕುಡ್ಡಿಕೇರಿ, ಪ್ರಶಾಂತ ಲಮಾಣಿ ಇತರರಿದ್ದರು. ಎನ್.ಎಸ್. ಸುರೇಶ ನಿರೂಪಿಸಿದರು. ಇದಕ್ಕೂ ಮುನ್ನ ಶಾಸಕ ಶಿವರಾಮ ಹೆಬ್ಬಾರ ಶಿಡ್ಲಗುಂಡಿ, ಬಡ್ಡಿಗೇರಿ, ಉಗ್ಗಿನಕೇರಿ, ಕುಸೂರ, ಅರಶಿಣಗೇರಿ ಸೇರಿ ಹಲವು ಗ್ರಾಮಗಳಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net