ಕ್ಷಯ ರೋಗಕ್ಕೆ ಉಚಿತ ಚಿಕಿತ್ಸೆ

HUN-MAR-26-2(TB AVARENESS PROGRAMME)
Published on

ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ವಿಶ್ವ ಕ್ಷಯರೋಗ ದಿನ ಆಚರಿಸಲಾಯಿತು.

ಹಿರಿಯ ಆರೋಗ್ಯ ನಿರೀಕ್ಷಕ ಹನುಮಂತು ಮಾತನಾಡಿ, ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಕ್ಷಯ ಅಥವಾ ಟಿಬಿ (ಟ್ಯೂಬರ್ ಕ್ಯುಲೋಸಿಸ್) ಕಾಯಿಲೆ ಬರುತ್ತದೆ. ಕೆಮ್ಮು, ಕಫದೊಂದಿಗೆ ಕೆಮ್ಮು, ಕಫದಲ್ಲಿ ರಕ್ತ, ಸತತ ಜ್ವರ, ಎದೆನೋವು, ದೇಹದ ಕೆಲ ಭಾಗಗಳಲ್ಲಿ ಗಂಟು, ತೂಕನಷ್ಟ, ಸುಸ್ತು, ರಾತ್ರಿ ಹೊತ್ತು ಬೆವರುವಿಕೆ ಮುಂತಾದವು ಕ್ಷಯರೋಗದ ಲಕ್ಷಣಗಳಾಗಿವೆ. ಕಫ ಪರೀಕ್ಷೆಯ ಮೂಲಕ ಕ್ಷಯರೋಗ ಪತ್ತೆ ಮಾಡಲಾಗುತ್ತದೆ. ಪೌಷ್ಟಿಕ ಆಹಾರ ಸೇವೆನೆಯೊಂದಿಗೆ ಮಾತ್ರ ಕ್ಷಯದ ವಿರುದ್ಧ ಹೋರಾಟ ಮಾಡಲು ಸಾಧ್ಯ. ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು. ಈ ಮೇಲ್ಕಂಡ ಯಾವುದೇ ಲಕ್ಷಣ ಇದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕ್ಷಯ ರೋಗಕ್ಕೆ ಉಚಿತ ಚಿಕಿತ್ಸೆ ಇರುತ್ತದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಕಾರ್ಯಕರ್ತೆಯರಾದ ಇಂದಿರಾ, ಮಾದೇವಿ, ಶ್ವೇತಾ, ಜಯಲಕ್ಷ್ಮೀ, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಗ್ರಾಮದಲ್ಲಿ ಅರಿವು ಮೂಡಿಸಲು ಜಾಥಾ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net