

ಕಿಕ್ಕೇರಿ: ರಿಕ್ರಿಯೇಷನ್ ಕ್ಲಬ್‌ಗಳು ಸಮಾಜಮುಖಿ ಚಿಂತನೆ, ಚಟುವಟಿಕೆಗೆ ವಿಶೇಷ ಗಮನ ನೀಡಲಿ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಹೋಬಳಿ ಕೇಂದ್ರದಲ್ಲಿ ಭಾನುವಾರ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕ್ಲಬ್‌ನಲ್ಲಿ ಬಹುತೇಕ ಸಮಾಜಮುಖಿ ಚಿಂತಕರು, ಹಿರಿಯ ನಾಗರಿಕರು ಇರುವುದು ಸಂತಸಕರ. ವಿಶ್ರಾಂತ ಜೀವನ ಕಳೆಯಲು ಇಲ್ಲಿನ ಚಟುವಟಿಕೆ ಸಹಕಾರಿಯಾಗಲಿ. ಸಮಾಜದಲ್ಲಿನ ಕೆಳಸ್ತರದವರನ್ನು ಮೇಲೆತ್ತುವ ಕೆಲಸದೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆತರುವ ಕೆಲಸ ಸಕ್ರಿಯವಾಗಿ ಆಗಲಿ. ಕ್ಲಬ್ ಮಾದರಿಯಾಗಿ ನಿರಂತರ ಚಟುವಟಿಕೆಯಿಂದ ಇರಲಿ. ಕೇವಲ ಮನೋರಂಜನೆಗೆ ಸೀಮಿತವಾಗದೆ ಮಾದರಿಯಾಗಿ ಕಾರ್ಯಚಟುವಟಿಕೆ ಮಾಡಿ ತೋರಿಸಲಿ ಎಂದು ಆಶಿಸಿದರು.
ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಮಲ್ಲೇಶ್, ಮಂಜುನಾಥ್, ಲಿಂಗರಾಜೇಗೌಡ, ಗಂಗಾಧರ್, ರಮೇಶ್, ದೇವೇಗೌಡ, ಕೃಷ್ಣೇಗೌಡ, ಪಾಂಡುರಂಗ ಮತ್ತಿತರರಿದ್ದರು.