ಕ್ರೆಡಿಟ್-ಡೆಪಾಸಿಟ್ ರೇಷಿಯೋ ಬೆಸ್ಟ್

0909Klb15
Published on

ಕಲಬುರಗಿ: ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಸಾರ್ವಜನಿಕರಿಗೆ, ಉದ್ಯಮಿಗಳಿಗೆ ಹಾಗೂ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿ, ಪ್ರಗತಿಗೆ ಕೈಜೋಡಿಸುವ ಜತೆಗೆ ಕ್ರೆಡಿಟ್ ಆ್ಯಂಡ್ ಡೆಪಾಸಿಟ್ ರೇಷಿಯೋ ಶೇ.೬೯.೦೩ ಕಾಯ್ದುಕೊಂಡಿರುವುದಕ್ಕೆ ಜಿಪಂ ಸಿಇಒ ಭಂವರ್‌ಸಿAಗ್ ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಸಮಾಲೋಚನಾ ಸಮಿತಿ, ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಹಾಗೂ ವಿಶೇಷ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿ, ಕೃಷಿ ವಲಯದಲ್ಲಿ ೧,೪೮೭ ಕೋಟಿ ರೂ. ಗುರಿ ಪೈಕಿ ೧,೪೧೭ ಕೋಟಿ ರೂ. ಸಾಲ ನೀಡಿ, ಶೇ.೯೫.೨೯ ಗುರಿ ಸಾಧಿಸಿರುವುದು ಉತ್ತಮ ಬೆಳವಣಿಗೆ. ಪಿಎಂ ಸ್ವನಿಧಿ ಅಡಿಯಲ್ಲಿ ಜೂನ್ ಅಂತ್ಯಕ್ಕೆ ನಿಗದಿತ ೧೧,೦೮೧ ಗುರಿ ಪೈಕಿ ೯,೮೯೬ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಕಂತಿನಲ್ಲಿ ತಲಾ ೧೦ ಸಾವಿರ ರೂ, ೨ನೇ ಕಂತಿನಲ್ಲಿ ೩,೩೮೧ ವ್ಯಾಪಾರಿಗಳಿಗೆ ತಲಾ ೨೦ ಸಾವಿರ ರೂ., ೩ನೇ ಕಂತಿನಲ್ಲಿ ೪೪೦ ಜನರಿಗೆ ಸಾಲ ನೀಡಿರುವುದು ಶ್ಲಾಘನೀಯ ಎಂದರು.
ಅಟಲ್ ಪಿಂಚಣಿ ಯೋಜನೆಯಡಿ ನಿಗದಿತ ಗುರಿಗಿಂತ ಶೇ.೧೧೪ ಸಾಧನೆ ಮಾಡಿದ್ದಕ್ಕೆ ಜಿಲ್ಲೆಗೆ ಕೇಂದ್ರ ಸರ್ಕಾರದ ಪಿಎಫ್‌ಆರ್‌ಡಿಎ ಇಲಾಖೆಯಿಂದ ಅವಾರ್ಡ್ ಬಂದಿದೆ. ಮತ್ಸÈ ಕೃಷಿಯಲ್ಲೂ ಉತ್ತಮ ಸಾಧನೆ ಇದೆ ಎಂದು ಹೇಳಿದರು.
ಮುದ್ರಾ ಸಾಲ ಹೆಚ್ಚು ಕೊಡಿ: ಜಿಲ್ಲೆ ಸಮಗ್ರ ಬೆಳವಣಿಗೆಗೆ ನವೋದ್ಯಮ ಆರಂಭಿಸುವ ನವೋದ್ಯಮಿಗಳಿಗೆ ಮುದ್ರಾ ಯೋಜನೆಯ ಅಡಿ ಹೆಚ್ಚಿನ ಸಾಲ ನೀಡಬೇಕು ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು. ಮುದ್ರಾ ಯೋಜನೆಯಡಿ ಜೂನ್ ಅಂತ್ಯಕ್ಕೆ ಶಿಶು ವಿಭಾಗದಲ್ಲಿ ೧೯,೧೨೩ ಜನರಿಗೆ ೬.೨೦ ಕೋಟಿ ರೂ., ಕಿಶೋರದಲ್ಲಿ ೮.೪೦ ಕೋಟಿ, ಹಾಗೂ ತರುಣ ವಿಭಾಗದಲ್ಲಿ ೩.೭೯ ಕೋಟಿ ರೂ. ನೀಡಿದ್ದನ್ನು ಪ್ರಶಂಶಿಸಿದರು.
ಬೆAಗಳೂರಿನ ಆರ್‌ಬಿಐ ಮ್ಯಾನೇಜರ್ ಸುಪ್ರಿಯಾ ಬ್ಯಾನರ್ಜಿ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್, ಎಸ್‌ಬಿಐ ರಿಜನಲ್ ಮ್ಯಾನೇಜರ್ ಸುಮಾ ಎಚ್., ಲೋನ್ ವಿಭಾಗದ ಚೀಫ್ ಮ್ಯಾನೇಜರ್ ರಾಮಸುಬ್ರಮಣ್ಯಂ, ಕೆಎಜಿಬಿ ವಲಯ ವ್ಯವಸ್ಥಾಪಕ ಶಾಂತಲಿAಗಯ್ಯ ಹುಲಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net