

ಬಾಗಲಕೋಟೆ: ವುಶುದಂತಹ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಧನೆಯ ಸಾಮಥ್ಯ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಜರುಗುವ ಶೈಕ್ಷಣಿಕ ಆಟಗಳನ್ನೂ ಸಹ ಪಠ್ಯದ ಭಾಗವಾಗಿಯೇ ಗ್ರಹಿಸುವ ಕಲೆ ಬೆಳೆಸಿಕೊಳ್ಳಬೇಕು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಸಂಯೋಜಕ ಪ್ರೊ. ಕೆ.ಎಂ. ಶಿರಹಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಬ.ವ್ಹಿ.ವ್ಹಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜನವರಿ ೧೦ರಂದು ಹಮ್ಮಿಕೊಳ್ಳಲಾಗಿದ್ದ ಬಾಗಲಕೋಟೆ ವಿಶ್ವವಿದ್ಯಾಲಯ ಮಟ್ಟದ ‘ವುಶು’ ಕ್ರೀಡಾರ್ಥಿಗಳ ಆಯ್ಕೆ ಪ್ರಕ್ರಿಯೆಯ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಬಾಗಲಕೋಟೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ತನ್ನದೇ ಆದ ಘನತೆ ಹಾಗೂ ಗೌರವಗಳಿವೆ. ವಿದ್ಯಾರ್ಥಿಗಳ ವಿದ್ಯಾರ್ಜನೆಯ ಜೊತೆಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಾಧನೆಗೈಯುವಂತೆ ಪ್ರೋತ್ಸಾಹಿಸುವಲ್ಲಿ ಈ ಸಂಸ್ಥೆ ಮಾಡುತ್ತ ಬಂದ ಕಾರ್ಯ ಅತ್ಯಂತ ಶ್ಲಾö್ಯಘನೀಯವಾದುದು. ಅಂತೆಯೇ ಇಂದು ಹಮ್ಮಿಕೊಂಡ ಈ ಕಾರ್ಯಕ್ರಮ ಕೂಡಾ ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ವುಶು ಅಸೋಸಿಯೇಶನ್‌ನ ಕಾರ್ಯದರ್ಶಿ ಶ್ರೀ ಅಶೋಕ ಮೊಕಾಶಿ ಮಾತನಾಡಿ ‘ದಕ್ಷಿಣ ಭಾರತವೂ ಸೇರಿದಂತೆ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ‘ವುಶು’ ಕ್ರೀಡೋತ್ಸವವಕ್ಕೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಡಾ.ವೀರಣ್ಣ ಚರಂತಿಮಠ ಅವರ ಕೊಡುಗೆ ಅಪಾರ. ಅವರ ನೇತೃತ್ವದಲ್ಲಿ ಈ ಬಗೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬರುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಡಾ. ಎಸ್.ಎಮ್. ಗಾಂವಕರ್ ಅವರು ಮಾತನಾಡಿ ‘ವುಶು’ ಎಂಬುದು ನಮ್ಮ ಭಾರತೀಯ ಪರಂಪರೆಯ ಕಲಾತ್ಮಕ ಆಟಗಳ ಮೂಲವಾಗಿದ್ದು, ಬಹುತೇಕರು ಕರಾಟೆಯನ್ನೇ ವುಶು ಆಟವೆಂದುಕೊAಡಿದ್ದಾರೆ ಆದರೆ ಕರಾಟೆ ಮತ್ತು ವುಶು ಆಟಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ಮೂಲ ಭಾರತೀಯರಾದ ಬೌದ್ಧ ಬಿಕ್ಷÄಗಳು ಕಾಲ್ದಾರಿ ಮೂಲಕ ಕಾಡುಮೇಡುಗಳ ಮೂಲಕ ಧರ್ಮ ಪ್ರಚಾರಕ್ಕಾಗಿ ದೇಶ ವಿದೇಶಗಳಿಗೆ ತೆರಳುವಾಗ ತಮ್ಮ ಆತ್ಮರಕ್ಷಣೆಗಾಗಿ ಈ ಕಲೆಯನ್ನು ಬಳಸಿಕೊಳ್ಳುತ್ತಿದ್ದರು. ಮುಂದೆ ಬೌದ್ಧಧರ್ಮವು ವಿದೇಶಗಳಲ್ಲಿಯೇ ಹೆಚ್ಚು ಪ್ರಚಾರ ಪಡೆದಂತೆ ಜೊತೆಗೆ ಈ ಆಟವೂ ಸಹ ಅಲ್ಲಿ ಹೆಚ್ಚು ಬಳಕೆಗೆ ಬಂದಿತು. ಹೀಗಾಗಿಯೇ ನಮ್ಮ ದೇಶಕ್ಕಿಂತಲೂ ಇದು ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ನಮ್ಮಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಇಂಥ ಆಟಗಳ ಉಳಿವು ಹಾಗೂ ಬೆಳವಣಿಗೆಗೆ ಪ್ರೇರಣೆ ದೊರೆಯಬೇಕಿದೆ ಎಂದರು.
ರಾಜ್ಯ ವುಶು ಅಸೋಸಿಯೇಶನ್‌ನ ಖಜಾಂಚಿ ಶ್ರೀ ಸಂಗಮೇಶ ಲಾಯದಗುಂದಿ, ಐಕ್ಯುಎಸಿ ಸಂಯೋಜಕರಾದ ಡಾ. ದೇವಪ್ಪ ಲಮಾಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಎ.ಎಲ್. ಕಾತರಕಿ, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ ಲೋಕಾಪುರ ಇದ್ದರು. ಡಾ. ದೇವಪ್ಪ ಲಮಾಣಿ ಸ್ವಾಗತಿಸಿ, ಪ್ರೊ. ಬಸವರಾಜ ಲೋಕಾಪುರ ಪರಿಚಯಿಸಿದರು. ಶಿವಾನಂದ ಮಡಿವಾಳರ ಪ್ರಾರ್ಥಿಸಿ, ಅಕ್ಷತಾ ಅಕ್ಕಿಮರಡಿ ನಿರೂಪಿಸಿ, ಶ್ರೀಹರಿ ಧೂಪದ ವಂದಿಸಿದರು.