

ಆಳಂದ: ಇತ್ತೀಚೆಗೆ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಮಾಡಿಯಾಳದ ಜೆಪಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಖೋಖೋದಲ್ಲಿ ಬಾಲಕ, ಬಾಲಕಿಯರು (ಪ್ರಥಮ), ೬೦೦ ಮೀ. ಓಟದಲ್ಲಿ ಲಕ್ಷಿö್ಮ ಎಚ್. (ಪ್ರಥಮ), ೨೦೦ ಮೀ. ಓಟದಲ್ಲಿ ಕಾರ್ತೀಕ್ ಕಲಶೆಟ್ಟಿ, ಮುತ್ತಣ್ಣ ಪ್ಯಾಟಿ (ಪ್ರಥಮ), ೪೦೦ ಮೀ. ಓಟದಲ್ಲಿ ಪ್ರಭಾಕರ ಕಲಶೆಟ್ಟಿ (ಪ್ರಥಮ), ೮೦೦ ಮೀ. ಓಟದಲ್ಲಿ ಆಕಾಶ ನಿಂಬಾಳ್ (ಪ್ರಥಮ), ೧೫೦೦ ಮೀ. ಓಟದಲ್ಲಿ ಸೃಷ್ಟಿ ಉಡಗಿ (ದ್ವಿತೀಯ), ಗುಂಡು ಎಸೆತದಲ್ಲಿ ಪ್ರಭಾಕರ ದೇವರಮನಿ (ದ್ವಿತೀಯ), ೨೦೦ ಮೀ. ಓಟದಲ್ಲಿ ನಾಗಮ್ಮ ವಾಡಿ (ದ್ವಿತೀಯ), ೧೦೦ ಮೀ. ಓಟದಲ್ಲಿ ರಾಕೇಶ ಕಲಶೆಟ್ಟಿ (ದ್ವಿತೀಯ), ೬೦೦ ಮೀ. ಓಟದಲ್ಲಿ ಸೌಮ್ಯ ಮಡಿವಾಳ (ದ್ವಿತೀಯ) ಸ್ಥಾನ ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಶಾಲೆ ಸಂಸ್ಥಾಪಕ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ, ಮುಖ್ಯಗುರು ಎಸ್.ವಿ.ಸೊಲ್ಲಾಪುರ, ಆರತಿ ಬೆಳಮಗಿ, ದೈಹಿಕ ಶಿಕ್ಷಕ ಕಿರಣ ಮಂಟಗಿ, ತಂಡದ ವ್ಯವಸ್ಥಾಪಕ ರಾಜಶೇಖರ ಬಿರಾದಾರ ಹರ್ಷ ವ್ಯಕ್ತಪಡಿಸಿದ್ದಾರೆ.