ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ

9.npk-1
Published on

ನಾಪೋಕ್ಲು: ಸಂಪಾಜೆಯ ಆದರ್ಶ ಫ್ರೆಂಡ್ಸ್ ಚಡಾವು ವತಿಯಿಂದ ಬಾಲಚಂದ್ರ ಕಳಗಿ ಅವರ ಸ್ಮರಣಾರ್ಥ 3ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇತ್ತೀಚೆಗೆ ಸಂಪಾಜೆಯಲ್ಲಿ ಆಯೋಜಿಸಲಾಗಿತ್ತು.

ಆದರ್ಶ ಫ್ರೆಂಡ್ಸ್ ಚಡಾವು ಅಧ್ಯಕ್ಷ ಸುನೀಲ್ ಪನೆಯಾಳ ಅಧ್ಯಕ್ಷತೆ ವಹಿಸಿದ್ದರು. ರಮಾದೇವಿ ಬಾಲಚಂದ್ರ ಕಳಗಿ, ಶ್ರೀಧರ ಪಡ್ಪು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಚಿಕ್ಕಮಗಳೂರಿನ ರಾಗ ಮಯೂರಿ ಎನ್‌ಆರ್ ಪುರ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಂಪಾಜೆಯ ಸೈನುದ್ದಿನ್, ನಿವೃತ್ತರಾದ ಶಿಕ್ಷಕಿ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು. ಯಶೋದರ, ವಿಕ್ರಾಂತ್, ಪ್ರಸಾದ್ ಕಾಟೂರು, ಭರತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net