ಕ್ರೀಡಾ ವಸತಿನಿಲಯಕ್ಕೆ ಭೂಮಿಪೂಜೆ

Published on

ಗೋಣಿಕೊಪ್ಪಲು: ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ವಸತಿನಿಲಯಕ್ಕೆ ಭೂಮಿಪೂಜೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಸೋಮವಾರ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕ್ರೀಡಾ ವಸತಿನಿಲಯದಲ್ಲಿ ಯುವ ಕ್ರೀಡಾಪಟುಗಳಿಗೆ ಎಲ್ಲ ರೀತಿಯಲ್ಲಿ ಆಧುನಿಕ ಸವಲತ್ತುಗಳೊಂದಿಗೆ, ಓದು ಹಾಗೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಉತ್ತಮ ತರಬೇತುದಾರರನ್ನು ನೇಮಿಸಲು ಸಹ ಸರ್ಕಾರದೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಸದಸ್ಯೆ ಭಾರತೀ, ಸುನೀತಾ, ಮುಕಳೇರ ಕುಶಾಲಪ್ಪ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಎರ್ಮು ಹಾಜಿ, ಶಾಜಿ ಅಚ್ಚುತನ್, ದಿಲು, ಹ್ಯಾರೀಶ್, ಅಜ್ಜಿಕುಟ್ಟಿರ ಪೋನು, ಗಿರೀಶ್, ಸುಕು ಬೋಪಣ್ಣ, ಅಣ್ಣಳಮಾಡ ಹರೀಶ್, ಕೂಪಣ್ಣಮಾಡ ಪ್ರೀತಮ್, ಮನು, ನಿಖಿಲ್, ಭವಿನ್, ಮೌನ, ಕುಂಡಚ್ಚಿರ ಮಂಜು ದೇವಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧ್ಯಾನ್, ತಹಸೀಲ್ದಾರ್ ಮೋಹನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net