ಕ್ರೀಡೆ, ಸಂಸ್ಕೃತಿಯಿಂದ ಯುವಸಮೂಹ ವಿಮುಖ

5HLY-1(A)
Published on

ಹಳಿಯಾಳ: ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಭಾನುವಾರ ನಡೆದ ಗ್ರಾಮೀಣ ಕುಸ್ತಿ ಹಬ್ಬ ನೋಡುಗರ ಮನಸ್ಸನ್ನು ರೋಮಾಂಚನಗೊಳಿಸಿತು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಈ ಕುಸ್ತಿ ಪಂದ್ಯಾವಳಿಗಾಗಿಯೇ ವಿಶೇಷ ಆಖಾಡಾ ಸಿದ್ಧಪಡಿಸಲಾಗಿತ್ತು. ಮಂಗಳವಾಡ ಗ್ರಾಮದ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಂಗೇಶ ಕೃಷ್ಣಾ ಪಾಟೀಲ ಪಂದ್ಯಾವಳಿಗೆ ಚಾಲನೆ ನೀಡಿದರು.

ಜಿಲ್ಲಾ ಕ್ರೀಡಾ ಪ್ರತಿಷ್ಠಾನದ ಮಹಾಂತೇಶ ಓಶೀಮಠ ಮಾತನಾಡಿ, ಹಳ್ಳಿಗಳಲ್ಲಿನ ಗರಡಿ ಮನೆಗಳು ಮುಚ್ಚಲಾರಂಭಿಸಿವೆ, ಆಧುನಿಕತೆಗೆ ಮರಳಾಗುತ್ತಿರುವ ಮಕ್ಕಳು ಹಾಗೂ ಯುವಸಮೂಹ ತಮ್ಮ ಸಾಂಪ್ರದಾಯಿಕ ಕಲೆ, ಕ್ರೀಡೆಯಿಂದ, ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲೂಕು ಮಾಜಿ ಪೈಲ್ವಾನರ ಸಂಘದ ಅಧ್ಯಕ್ಷ ಡೊಂಗ್ರು ವಾಲೇಕರ, ಕುಸ್ತಿ ಪಂದ್ಯಾವಳಿ ಪ್ರಾಯೋಜಕರಾದ ಡಾ. ಪ್ರಸಾದ ಬಂಡಗಿ, ಜಿಲ್ಲಾ ಕ್ರೀಡಾ ಪ್ರತಿಷ್ಠಾನದ ಮಹಾಂತೇಶ ಓಶೀಮಠ, ಸಂಘಟಕರಾದ ಉದಯ ಜಾಧವ, ಯಲ್ಲಪ್ಪ ಮಾಳವಣಕರ, ಅನಿಲ ಲಾಡ, ಜಗದೀಶ ಉಪ್ಪಿನ ಇದ್ದರು.

180 ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಕುಸ್ತಿ ಅಭಿಮಾನಿಗಳ ಆಗ್ರಹದ ಮೇರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಖ್ಯಾತ ಪೈಲ್ವಾನರನ್ನು ಆಹ್ವಾನಿಸಿ ಮೂರು ವಿಭಾಗಗಳಲ್ಲಿ ಜೋಡಿ ಕುಸ್ತಿ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net