

ಕಾರವಾರ: ಕುಟುಂಬ ಕ್ರಿಸ್‌ಮಸ್ ಮುಗಿಸಿ ಹೊಸ ವರ್ಷ ಸ್ವಾಗತಕ್ಕೆ ಸಿದ್ಧತೆ ನಡೆಸಿತ್ತು. ಶಾಲೆಗೆ ಕ್ರಿಸ್‌ಮಸ್ ಅಂಗವಾಗಿ ವಾರಗಳ ರಜೆ ಇದ್ದುದರಿಂದ ಅಪ್ಪನ ಜತೆ ಪುಟ್ಟ ಮಗಳು ಸ್ಕೂಟರ್‌ನಲ್ಲಿ ಓಡಾಟ ನಡೆಸಿದ್ದಳು. ಆದರೆ, ವಿಧಿಯಾಟ ಬೇರೆಯೇ ಇತ್ತು. ಯಮನಾಗಿ ಬಂದ ಖಾಸಗಿ ಬಸ್ ವಿದ್ಯಾರ್ಥಿನಿಯ ಜೀವ ತೆಗೆದಿದೆ. ಬಾಲೆಯ ಜೀವ ತೆಗೆದ ಬಸ್ ವಿರುದ್ಧ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಇದು ಕಾರವಾರದಲ್ಲಿ ಶನಿವಾರ ಇಯರ್ ಎಂಡ್ ದಿನ ನಡೆದ ದಾರುಣ ಘಟನೆ.
ಖಾಸಗಿ ಬಸ್ ಡಿಕ್ಕಿಯಾಗಿ ಸ್ಕೂಟರ್ ಹಿಂಬದಿ ಸವಾರೆ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಿಣಗಾದಲ್ಲಿ ನಡೆದಿದೆ.
ಲವಿತಾ ಜಾರ್ಜ್ ಫರ್ನಾಂಡಿಸ್(13) ಮೃತಳು. ಸೇಂಟ್ ಮೈಕಲ್ಸ್ ಕಾನ್ವೆಂಟ್‌ನಲ್ಲಿ 7 ನೇ ತರಗತಿ ಓದುತ್ತಿದ್ದಳು. ಶನಿವಾತ ತಂದೆ ಜಾರ್ಜ್ ಫರ್ನಾಂಡಿಸ್ ಅವರ ಸ್ಕೂಟರ್‌ನಲ್ಲಿ ಕಾರವಾರ ಕಡೆ ತೆರಳುತ್ತಿರುವಾಗ ಬಂದ ಖಾಸಗಿ ಬಸ್ ಹಿಂಬದಿಯಿAದ ಬಡಿದಿದೆ. ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ತಂದೆ ಜಾರ್ಜ್ ಅವರು ಗಾಯಗಳೊಂದಿಗೆ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಸಾವಿಗೆ ಪರಿಹಾರ ನೀಡುವಂತೆ ಸ್ಥಳೀಯರು ಬಸ್ ತಡೆದು ಪ್ರತಿಭಟಿಸಿದರು.