

ಹನೂರು: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಎಂ.ಆರ್.ಮಂಜುನಾಥ್ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಚರ್ಚ್ ಹಾಗೂ ಮುಖಂಡರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ಕೋರಿದರು.
ಕೌದಳ್ಳಿ, ವಡ್ಡರದೊಡ್ಡಿ, ಸುಳವಾಡಿ, ಮಾರ್ಟಳ್ಳಿ, ಸಂದನಪಾಳ್ಯ ಹಾಗೂ ಇನ್ನಿತರ ಗ್ರಾಮದ ಚರ್ಚ್‌ಗಳಿಗೆ ಶಾಸಕರು, ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ತೆರಳಿ ಶುಭಾಶಯ ತಿಳಿಸಿದರು. ಚರ್ಚ್ ಆವರಣದಲ್ಲಿ ನಿರ್ಮಿಸಿದ್ದ ಗೋದಲಿಗೆ ನಮಿಸಿದರು. ಧರ್ಮಗುರುಗಳಿಗೆ ಸಿಹಿ ವಿತರಿಸಿ ಶುಭಾಶಯ ಕೋರಿದರು. ಮುಖಂಡರಾದ ಮಂಜೇಶ್, ಚಿನ್ನವೆಂಕಟ, ನಾಗರಾಜು, ಮುರುಗೇಶ್ ಇತರರಿದ್ದರು.