ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್ ಶಿಬಿರ

Published on

ಸಿದ್ದಾಪುರ: ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ವಿರಾಜಪೇಟೆ ವತಿಯಿಂದ ಏಪ್ರಿಲ್ 1ರಿಂದ 30ರವರೆಗೆ ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

ಏಪ್ರಿಲ್ 1ರಿಂದ ವಿರಾಜಪೇಟೆ ಪ್ರಗತಿ ಶಾಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ನಡೆಯಲಿದೆ. ಮೊದಲ ತಂಡಕ್ಕೆ ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3.30 ರವರೆಗೆ, ಎರಡನೇ ತಂಡಕ್ಕೆ ಸಂಜೆ 4 ಗಂಟೆಯಿಂದ 6 ರವರೆಗೆ ತರಬೇತಿ ನೀಡಲಾಗುವುದು. ಷಟಲ್ ಬ್ಯಾಡ್ಮಿಂಟನ್ ತರಬೇತಿಯು ಏಪ್ರಿಲ್ 1 ರಿಂದ 30ರವರೆಗೆ ವಿರಾಜಪೇಟೆಯ ಜೂನಿಯರ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಷಟಲ್ ಬ್ಯಾಡ್ಮಿಂಟನ್ ತರಬೇತಿಯಲ್ಲಿ ಭಾಗವಹಿಸುವವರಿಗೆ 1000 ರೂ.ತರಬೇತಿ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9380297168/ 9080822944. 9448320838/ 6364312028.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net