ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಲ್ಲಾಪುರ ತಂಡ ಪ್ರಥಮ

IMG-20250629-WA0390
Published on

ಅರಸೀಕೆರೆ ಗ್ರಾಮಾಂತರ: ಕ್ರಿಕೆಟ್ ಫೈನಲ್ ಪಂದ್ಯಾವಳಿ ಮಲ್ಲಾಪುರ ತಂಡ ಹಾಗೂ ನಾಗರಾಜಪುರ ತಂಡಗಳ ನಡುವೆ ನಡೆದು, ಮಲ್ಲಾಪುರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತಲ್ಲದೆ, ನಾಗರಾಜಪುರ ತಂಡ ದ್ವಿತೀಯ ಸ್ಥಾನ ಗಳಿಸಿತು.

ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಭೈರಗೊಂಡನಹಳ್ಳಿ ಗ್ರಾಮದ ಯುವಕ ದಿವಂಗತ ಜೇನುಕಲ್ ಅವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಭೋವಿ ಸಮಾಜದವರಿಗೆ ಮಾತ್ರ ಎರಡು ದಿನ ನಡೆದ ಕ್ರಿಕೆಟ್ ಪಂದ್ಯಾವಳಿ 16 ತಂಡಗಳು ಭಾಗವಹಿಸಿದ್ದವು.

ಬೈರಗೊಂಡನಹಳ್ಳಿ ಗೇಟ್ ಬಳಿ ಇರುವ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಿತು. ಪ್ರಥಮ ಬಹುಮಾನ 50 ಸಾವಿರ ರೂ.ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 25 ಸಾವಿರ ರೂ.ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.

ಬೈರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಆನಂದ್, ಮುಖಂಡರಾದ ಜಾಜೂರು ಧರ್ಮಣ್ಣ, ಬೈರಗೊಂಡನಹಳ್ಳಿ ಪರಮೇಶ್, ಗಾಂಧಿನಗರ ಶಿವಣ್ಣ, ಶೇಖರ್, ಪ್ರಹ್ಲಾದ್, ಚೌಡ ಭೋವಿ, ಉದಯ್‌ಕುಮಾರ್, ಸೋಮಶೇಖರ್, ದೇವರಾಜ್, ವಸಂತ, ಸಂತೋಷ್, ಗಾಂಧಿನಗರ ಹರೀಶ್, ಸತೀಶ್, ಸೋಮಶೇಖರ್, ಮಂಜುನಾಥ್, ರಕ್ಷಕ್, ತೇಜಸ್ ಯಾದಪುರ, ಮಂಜುನಾಥ್ ತೋರಣ್, ಕಿರಣ್ ಗಾಂಧಿನಗರ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net