

ಬೆಳಗಾವಿ: ಜಲ ಸಂರಕ್ಷಣೆ ಮತ್ತು ಪರಿಸರ ಸುಸ್ಥಿರತೆಗೆ ಶ್ರಮಿಸುತ್ತಿರುವ ಪ್ಯಾಸ್ ಫೌಂಡೇಷನ್‌ನಿಂದ ಕ್ಯಾಂಪ್ ಪ್ರದೇಶದಲ್ಲಿರುವ ಒಂದೂವರೆ ಎಕರೆ ವಿಸ್ತೀರ್ಣದ ಧೋಬಿ ಘಾಟ್ ಕೆರೆಯನ್ನು ಅಭಿವೃದ್ಧಿ ಪಡಿಸಿ, ಅಕ್ಷಯ ತೃತೀಯಾ ಸಂದರ್ಭ ಬುಧವಾರ ಬ್ರಿಗೇಡಿಯರ್ ಜಾಯ್ದೀಪ್ ಮುಖರ್ಜಿ, ಕಂಟೋನ್ಮೆಂಟ್ ಬೋರ್ಡ್‌ನ ಸಿಇಒ ರಾಜೀವ್‌ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಕೆರೆಯನ್ನು ಪಕ್ಷಿಗಳ ಆಕರ್ಷಣೆಯ ತಾಣವಾಗಿ ಸುಂದರವಾಗಿ ಮಾರ್ಪಡಿಸಲಾಗಿದೆ. ಸ್ನೇಹಮ್ ಟ್ಯಾಪಿಂಗ್ ಸೊಲ್ಯೂಷನ್ಸ್‌ನಿಂದ ಸಿಎಸ್‌ಆರ್ ಅನುದಾನ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಜಿಯ ತಾಂತ್ರಿಕ ಮಾರ್ಗದರ್ಶನ ಪಡೆದು ಕರೆ ಅಭಿವೃದ್ಧಿ ಪಡಿಸಲಾಗಿದೆ. ಪಕ್ಷಿಗಳು ಗೂಡು ಕಟ್ಟುವುದಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿದ್ದು, ಸೂಕ್ಷ್ಮ ಪರಿಸರ ವ್ಯವಸ್ಥೆ ಸೃಷ್ಟಿಸಲಾಗಿದೆ.
ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಜಾಯ್ದೀಪ್ ಮುಖರ್ಜಿ, ರಾಜೀವ್‌ಕುಮಾರ್ ಅವರು ಫೌಂಡೇಷನ್ ಕಾರ್ಯವನ್ನು
ಶ್ಲಾಸಿದರು. ಫೌಂಡೇಷನ್ ಅಧ್ಯಕ್ಷ ಡಾ.ಮಾಧವ ಪ್ರಭು, ಕಾರ್ಯದರ್ಶಿ ಡಾ.ಪ್ರೀತಿ ಕೋರೆ, ಉಪಾಧ್ಯಕ್ಷ ಅಭಿಮನ್ಯು ಡಾಗಾ, ಖಜಾಂಚಿ ಲಕ್ಷ್ಮೀಕಾಂತ ಪಸಾರಿ, ದೀಪಕ ಔಲ್ಕರ್, ಅವಧೂತ ಸಮಂತ, ಸೂರ್ಯಕಾಂತ, ರೋಹನ್ ಕುಲಕರ್ಣಿ, ಸತೀಶ ಲಾಡ್ ಹಾಗೂ ಸ್ನೇಹಮ್ ಟ್ಯಾಪಿಂಗ್ ಸೊಲ್ಯೂಷನ್ಸ್‌ನ ಅನೀಶ ಮೆಟ್ರಾನಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ನಿತಿನ್ ಖೋಟ್, ಸಿಎಸ್‌ಆರ್
ಪಾಲುದಾರರಾದ ಸತೀಶ್ ಮನ್ನೂರ್ಕರ ಇತರರಿದ್ದರು.