ಕ್ಯಾಂಟರ್ ಡಿಕ್ಕಿ ಹೊಡೆದು ಸ್ಥಳದಲ್ಲೆ ನಾಲ್ವರು ಸಾವು

ಹುನಗುಂದ ತಾಲೂಕಿನ ಧನ್ನೂರ ಬಳಿಕ ಸಂಭವಿಸಿದ ಅಪಘಾತ
bkt-26-3
Published on

ಹುನಗುಂದ : ಕ್ಯಾಂಟರ್ ಲಾರಿಯೊಂದು ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿರುವ ದುರ್ಘಟನೆ ಗುರುವಾರ ನಸುಕಿನ ಜಾವ ತಾಲೂಕಿನ ಧನ್ನೂರ ಬಳಿ ಟೋಲ್ ನಾಕಾ ಹತ್ತಿರ ಸಂಭವಿಸಿದೆ.

ಸಾವನ್ನಪ್ಪಿರುವ ನಾಲ್ವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದವರು ಎಂದು ಗುರಿತಿಸಲಾಗಿದೆ. ಲಕ್ಷ÷್ಮಣ ವಡ್ಡರ (೫೫), ಬೈಲಪ್ಪ ಬಿರಾದಾರ (೪೬), ರಾಮಣ್ಣ ನಾಯಕಮಕ್ಕಳ(೫೭) ಹಾಗೂ ಕಾರು ಚಾಲಕ ಮಹಮ್ಮದ್ ರಫೀಕ್ ಮುಲ್ಲಾ (೨೩) ಮೃತ ದುರ್ದೈವಿಗಳು.
ಲಕ್ಷಣ ಎನ್ನುವವರು ಬಳ್ಳಾಯವರಿಗೆ ಟಿಪ್ಪರ್ ಮಾರಾಟ ಮಾಡಿದ್ದರಂತೆ. ಅದರ ದಾಖಲಾತಿಗೆ ಸಹಿ ಮಾಡಲೆಂದು ಇತರರ ಜೊತೆ ಸೇರಿ ಕಾರು ತೆಗೆದುಕೊಂಡು ಹೋಗಿದ್ದರು. ಬಳ್ಳಾರಿಯಿಂದ ವಾಪಸ್ಸು ಬರುವ ವೇಳೆ ವಿಜಯನಗರ ಸಮೀಪದ ಹುಲಿಗೆಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ವಾವಸ್ಸು ಊರಿಗೆ ಬರುತ್ತಿದ್ದರು.
ಹುನಗುಂದ ದಾಟಿ ಎನ್ ಎಚ್ ೬೦ಯಲ್ಲಿ ಹೊರಟಿದ್ದಾಗ ಅತ್ತ ಧನ್ನೂರ ಕಡೆಯಿಂದ ಹುನಗುಂದ ಕಡೆಗೆ ಹೊರಟಿದ್ದ ಕ್ಯಾಂಟರ್ ಲಾರಿಯೊಂದು ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ನಸುಕಿನ ಜಾಗ ೨.೩೦ ರಿಂದ ೩ ಗಂಟೆಯ ಮಧ್ಯ ಈ ಅಪಘಾಯ ಸಂಭವಿಸಿದ್ದು, ಲಾರಿ ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ಮೃತ ಲಕ್ಷಣ ಅವರ ಪತ್ನಿ ಬಸಮ್ಮ ವಡ್ಡರ ಅವರು ಹುನಗುಂದ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂ-ÀÇರ್ಣ ನಜ್ಜುನುಜ್ಜಾಗಿದೆ. ಕ್ಯಾಂಟರ್ ಪಲ್ಟಿಯಾಗಿ ಬಿದ್ದಿದ್ದು, ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಪ್ರಸಾದವಾಗಿ ತಂದಿದ್ದ ಬಾಳೆಹಣ್ಣು ರಸ್ತೆಯಲ್ಲಿ ಬಿದ್ದಿದ್ದವು. ಇನ್ನು ೨೦ ನಿಮಿಷ ಕಳೆದಿದ್ದರೆ ಕಾರು ಬಿದರಕುಂದಿ ಗ್ರಾಮವನ್ನು ಮುಟ್ಟಿ ನಾಲ್ವು ತಮ್ಮ ತಮ್ಮ ಮನೆ ಸೇರುತ್ತಿದ್ದರು. ಆದರೆ, ಕ್ಯಾಂಟರ್ ಮೂಲದ ಎದುರಾದ ಜವರಾಯ ನಾಲ್ವರನ್ನು ಮಸಣದ ಕಡೆಗೆ ಸಾಗಿಸಿದ್ದಾನೆ.

ಹಿರಿಯ ಪೊಲೀಸ್ ಅಽಕಾರಿಗಳ ಭೇಟಿ ಪರಿಶೀಲನೆ
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ, ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ ಸವದಿ, ಪಿಎಸ್‌ಐಗಳಾದ ಪ್ರಕಾಶ ಡಿ, ಸಿ.ಟಿ.ರಂಗಾಪುರ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಜತೆಗೆ ಎ-ï‌ಎಸ್‌ಎಲ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಸ್ಥಳದಲ್ಲಿನ ಎಲ್ಲ ದೃಶ್ಯಗಳನ್ನು ಸಂಗ್ರಹಿಸಿದೆ.

ಕುಟುಂಬಸ್ಥರ ಆಕ್ರಂದನ :
ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಸುದ್ದಿ ತಿಳಿದು ಸ್ಥಳಕ್ಕೆ ಅವರ ಕುಟುಂಬಸ್ಥರು ಹಾಗೂ ಗ್ರಾಮದ ಜನರು ದೌಡಾಯಿಸಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ನಾಲ್ವರು ಇನ್ನಿಲ್ಲ ಎನ್ನುವ ಆಘಾತ ಜನರಲ್ಲಿ ಕಂಡು ಬಂದಿತು. ಹುನಗುಂದ ತಾಲೂಕು ಆಸ್ಪÀತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಬದರಕುಂದಿ ಗ್ರಾಮಕ್ಕೆ ಶವಗಳನ್ನು ತೆಗೆದುಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net