ಕೋಳಗುಂದ ಪ್ರೌಢಶಾಲೆ ಬಾಲಕಿಯರ ತಂಡ ಚಾಂಪಿಯನ್

ASK 01,ಕೋಳಗುಂದ ಸರ್ಕಾರಿ ಪ್ರೌಢಶಾಲೆಯಾ ಬಾಲಕಿಯರಿಗೆ
Published on

ಅರಸೀಕೆರೆ ಗ್ರಾಮಾಂತರ: ಜಾವಗಲ್ ಶ್ರೀನಾಥ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಾವಗಲ್ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕೋಳಗುಂದ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಸತತ ಹತ್ತನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು.

ಬಾಲಕಿಯರ ವಿಭಾಗದಲ್ಲಿ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ವಾಲಿಬಾಲ್ ಪ್ರಥಮ, ಖೋ-ಖೋ ದ್ವಿತೀಯ, 4್ಡ100 ಮೀ ರಿಲೇ ಪ್ರಥಮ, 400 ಮೀ ರಿಲೇ ಪ್ರಥಮ ಸ್ಥಾನ ಪಡೆದರು.

ವೈಯಕ್ತಿಕ ವಿಭಾಗದಲ್ಲಿ ಅಂಜಲಿ 800 ಮೀ ಪ್ರಥಮ, ಜಾವೆಲಿನ್ ಥ್ರೋ ಪ್ರಥಮ, ಡಿಸ್ಕಸ್ ಥ್ರೋ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಾಣಿ ಪ್ರಶಸ್ತಿ ಪಡೆದರು. ಸಿಂಚನಾ 1500 ಮೀ. ಓಟ ಪ್ರಥಮ, 800 ಮೀ ದ್ವಿತೀಯ, ದೀಪು ಎತ್ತರ ಜಿಗಿತ ಎತ್ತರ ಜಿಗಿತ ಪ್ರಥಮ, ಟ್ರಿಪಲ್ ಜಂಪ್ ದ್ವಿತೀಯ, ರಮ್ಯಾ ಬಾಯಿ ಟ್ರಿಪ್ಪಲ್ ಜಂಪ್ ಪ್ರಥಮ, ಹ್ಯಾಮರ್ ಥ್ರೋ ದ್ವಿತೀಯ, ಮೇಘನಾ ತೃತೀಯ, ದಿವ್ಯಾ 200 ಮೀ ಓಟ ದ್ವಿತೀಯ, 100 ಮೀ ೀಟ ತೃತೀಯ, ಗುಂಡು ಎಸೆತ ತೃತೀಯ, ನವ್ಯಾ 400 ಮೀಟರ್ ಓಟ ದ್ವಿತೀಯ, ಅಮೃತಾ ತೃತೀಯ, ಸ್ಪಂದನಾ ಜಾವೆಲಿನ್ ತೃತೀಯ, ಗುಂಡು ಎಸೆತ ದ್ವಿತೀಯ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಜೀವನ್ 800 ಮೀಟರ್ ಪ್ರಥಮ, ಗುಂಡು ಎಸೆತ ತೃತೀಯ, ಲಿಖಿತ್ 800 ಮೀಟರ್ ದ್ವಿತೀಯ, ಟ್ರಿಪ್ಪಲ್ ಜಂಪ್ ದ್ವಿತೀಯ, 400 ಮೀ. ದ್ವಿತೀಯ, ಆದಿತ್ಯ ಜಾವೆಲಿನ್ ಥ್ರೋ ಪ್ರಥಮ, ಜಿ.ಟಿ.ಆದಿತ್ಯ 1500 ಮೀ ದ್ವಿತೀಯ, 200 ಮೀಟರ್ ತೃತೀಯ, ವರುಣ್ ಹ್ಯಾಮರ್ ಥ್ರೋ ತೃತಿಯ, ಚಂದ್ರಶೇಖರ್ ಉದ್ದ ಜಿಗಿತ ತೃತೀಯ ಬಹುಮಾನ ಪಡೆದರು.

ವಿಜೇತ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಬಸಲಿಂಗಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಮೂರ್ತಿ ಶೆಟ್ಟರ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನ ಕುಮಾರ್ ಸುರೆ, ಶಿಕ್ಷಕರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net