

ಬಾಗಲಕೋಟೆ: ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರ ತೊಡಗಿದೆ. ಶುಭ ಮಹೂರ್ತ ನೋಡಿಕೊಂಡು ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ತೋರುತ್ತಿದ್ದಾರೆ. ಸೋಮವಾರ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಸೋಮವಾರದಂದು ೧೨ ಅಭ್ಯರ್ಥಿಗಳಿಂದ ಒಟ್ಟು ೧೭ ನಾಮಪತ್ರಗಳು ಸಲ್ಲಿಕೆಯಾಗಿವೆ.
ಬಾಗಲಕೋಟೆ ಮತಕ್ಷೇತ್ರದಿಂದ ೬, ಬಾದಾಮಿ ಕ್ಷೇತ್ರದಿಂದ ೪, ಹುನಗುಂದ ಕ್ಷೇತ್ರದಿಂದ ೪, ಮುಧೋಳ ಕ್ಷೇತ್ರದಿಂದ ೨, ತೇರದಾಳ ಕ್ಷೇತ್ರದಿಂದ ೧ ಹಾಗೂ ಬೀಳಗಿ ಮತ್ತು ಜಮಖಂಡಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವದಿಲ್ಲ.
ಬಾಗಲಕೋಟೆ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಹುಲ್ಲಪ್ಪ ಮೇಟಿ ೨ ನಾಮಪತ್ರ ಸಲ್ಲಿಸಿದರೆ, ಪಕ್ಷೇತರದಿಂದ ಮಲ್ಲಿಕಾರ್ಜುನ ಚರಂತಿಮಠ, ಜೆಡಿಎಸ್ ಪಕ್ಷದಿಂದ ದೇವರಾಜ ಪಾಟೀಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬಾಬುಶಾ ರೊಳ್ಳಿ, ಆಮ್ ಆದ್ಮಿ ಪಕ್ಷದಿಂದ ರಮೇಶ ಬದ್ನೂರ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಬಾದಾಮಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಭೀಮಸೇನ್ ಚಿಮ್ಮನಕಟ್ಟಿ ಮತ್ತು ಕರ್ನಾಟಕ ಜನತಾ ಪಕ್ಷದಿಂದ ಮಾರುತಿ ಜಮೀನ್ದಾರ ತಲಾ ಎರಡು ನಾಮಪತ್ರ ಸಲ್ಲಿಸಿದ್ದಾರೆ.
ಹುನಗುಂದ ಮತಕ್ಷೇತ್ರದಿಂದ ಪಕ್ಷೇತರದಿಂದ ಷಡಕ್ಷರಯ್ಯ ನವಲಿಹಿರೇಮಠ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ದೇಸಾಯಗೌಡ ಮಲ್ಲನಗೌಡ ಗೌಡರ ತಲಾ ಒಂದು, ಕಾಂಗ್ರೆಸ್ ಪಕ್ಷದಿಂದ ವಿಜಯಾನಂದ ಕಾಶಪ್ಪನವರ ೨ ನಾಮಪತ್ರ ಸಲ್ಲಿಸಿದ್ದಾರೆ. ಮುಧೋಳ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆರ್.ಬಿ.ತಿಮ್ಮಾಪುರ ೨ ನಾಮಪತ್ರ ಸಲ್ಲಿಸಿದ್ದಾರೆ. ತೇರದಾಳ ಮತಕ್ಷೇತ್ರದಿಂದ ಪಕ್ಷೇತರದಿಂದ ಅಂಬಾದಾಸ್ ಕಾಮೂರ್ತಿ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಬೀಳಗಿ ಮತ್ತು ಜಮಖಂಡಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವದಿಲ್ಲ. ಪ್ರಾರಂಭದಿಂದ ಇಲ್ಲಿಯವರೆಗೆ ಜಿಲ್ಲೆಯ ಎಳು ಮತಕ್ಷೇತ್ರಗಳಲ್ಲಿ ಒಟ್ಟು ೩೨ ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಽಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.
ಕೋಟ್..
ಬಾಗಲಕೋಟೆ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಎದುರಾಳಿ ಕಾಂಗ್ರೆಸ್ ಪಕ್ಷ ಮಾತ್ರ. ಜಿಲ್ಲೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ೧೯೮೩ ರಲ್ಲಿ ಜಿ.ವಿ.ಮಂಟೂರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದರು. ೨೦೨೩ ಚುನಾವಣೆಯಲ್ಲಿ ಈ ರೀತಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಬದಲಾವಣೆಯಾಗಲಿದೆ. ನನಗೆ ಅವಕಾಶ ದೊರೆಯುವ ವಿಶ್ವಾಸವಿದೆ. ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇನೆ.* ಮಲ್ಲಿಕಾರ್ಜುನ ಚರಂತಿಮಠ ಬಾಗಲಕೋಟೆ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಕೋಟ್..
ಬಾಗಲಕೋಟೆ ಮತಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಬಾಗಲಕೋಟೆ ಜನ ಬದಲಾವಣೆ ಬಯಸಿದ್ದಾರೆ. ಮತಕ್ಷೇತ್ರದ ಅಭಿವೃದ್ಧಿಗೆ ನನ್ನದೆಯಾದ ಯೋಜನೆ ಹಾಕಿಕೊಂಡಿದ್ದೇನೆ. ನನಗೆ ಅವಕಾಶ ನೀಡುವ ವಿಶ್ವಾಸವಿದೆ.* ಡಾ.ದೇವರಾಜ ಪಾಟೀಲ ಬಾಗಲಕೋಟೆ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ