ಕೋಟೆನಾಡಲ್ಲಿ ರಾಮನವಮಿ ಸಂಭ್ರಮ

bkt-6-1
ಬಾದಾಮಿ ತಾಲೂಕಿನ ಸೂಳಿಕೇರಿ ರಾಮದೇವರಿಗೆ ವಿಶೇಷ ಅಲಂಕಾರ.
Published on

ಬಾಗಲಕೋಟೆ: ಶ್ರೀರಾಮ ನವಮಿಯನ್ನು ಪ್ರಸಕ್ತ ವರ್ಷ ಜಿಲ್ಲೆಯಾದ್ಯಂತ ಭಾನುವಾರ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಎಲ್ಲೆಡೆ ಸಂತಸ ಮನೆ ಮಾಡಿತ್ತು.

ಬಾಗಲಕೋಟೆ ನಗರದ ಕೊತ್ತಲೇಶ ದೇವಸ್ಥಾನ, ವಿನಾಯಕ ನಗರದ ಶೃಂಗೇರಿ ಶಂಕರಮಠ, ನವನಗರದ ವೆಂಕಟೇಶ್ವರ ದೇವಸ್ಥಾನ ಹಾಗೂ ಜಿಲ್ಲೆಯ ಬಾದಾಮಿ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ, ತೇರದಾಳ, ಹುನಗುಂದ, ಇಳಕಲ್ಲ, ಅಮೀನಗಡ ಕಮತಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಾಮ ದೇವರ ದೇವಸ್ಥಾನ, ಆಂಜನೇಯ ದೇವಸ್ಥಾನದಲ್ಲಿ ಪ್ರಭು ಶ್ರೀರಾಮನ ಮೂರ್ತಿ ತೊಟ್ಟಿಲಕ್ಕೆ ಹಾಕಿ ನವಮಿಯನ್ನು ಆಚರಿಸಲಾಯಿತು.

ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಶ್ರೀರಾಮದೇವಸ್ಥಾನಕ್ಕೆ ರಾಮನವಮಿ ನಿಮಿತ್ತ ವಿದ್ಯುತ್‌ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಇನ್ನೂ ಬೆಳಗ್ಗೆಯಿಂದ ಶ್ರೀರಾಮ ದೇವರಿಗೆ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ ತೊಟ್ಟಿಲೋತ್ಸವ ನಾಮಕರಣ ಸಮಾರಂಭ, ಪ್ರವಚನ, ಪಂಚಾಮೃತ ಮಹಾಪೂಜೆ ಜರುಗಿದವು. ಸಂಜೆ ವಸಂತ ಪೂಜೆ ಅಲ್ಪೋಪಹಾರ ಕಾರ್ಯಕ್ರಮ ನಡೆಯಿತು. ಸಹಸ್ರಾರು ಭಕ್ತರು ಶ್ರೀರಾಮ ನಾಮ ಜಪ ಮಾಡಿ ಪ್ರಾರ್ಥಿಸಿದರು. ವಿವಿಧೆಡೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net