ಕೋಟೆನಾಡಲ್ಲಿ ದಿಗ್ಗಜರ ಜಯಂತಿ ಆಚರಣೆ

bkt-2-6
Published on

ಬಾಗಲಕೋಟೆ: ರಾಷ್ಟ್ರಪಿತ ಮಹಾತ್ಮಾ ಗಾಂಽÃಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಜಯಂತಿಯನ್ನು ಜಿಲ್ಲೆಯಾದ್ಯಂತ ಆಚರಿಸಲಾಯಿತು. ಸಂಘ, ಸಂಸ್ಥೆ, ಶಾಲಾ, ಕಾಲೇಜು ಹಾಗೂ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಇಬ್ಬರು ದಿಗ್ಗಜರ ಭಾವಚಿತ್ರ ಇರಿಸಿ ನಮನ ಸಲ್ಲಿಸಲಾಯಿತು.

ವಿದ್ಯಾ ಪ್ರಸಾರಕ ಮಂಡಳ:
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ-೧ ಮತ್ತು ೨ರ ಸಹಯೋಗದಲ್ಲಿ ನಡೆದ ಗಾಂಽÃಜಿ ಹಾಗೂ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಅವರ ವ್ಯಕ್ತಿತ್ವ ಹಲವು ಆದರ್ಶಗಳ ಸಂಗಮವಾಗಿದ್ದು ಅವರ ತತ್ವ ಸಿದ್ಧಾಂತಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದರು.
ಸರಳವಾಗಿ ಬದುಕಿ ಅಸಾಧಾರಣ ಸಾಧನೆಯನ್ನು ಮಾಡಿದ ಇವರೀರ್ವರ ವ್ಯಕ್ತಿತ್ವದಿಂದ ಯುವಜನತೆ ಪ್ರೇರಣೆ ಪಡೆಯಬೇಕು. ಸರಳತೆಯಿಂದ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಸಂದೇಶವನ್ನು ಅವರು ಜನತೆಗೆ ನೀಡಿದ್ದಾರೆ. ಉನ್ನತ ಆಲೋಚನೆಯಿದ್ದಲ್ಲಿ ತ್ಯಾಗ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ ಎಂಬುದನ್ನು ಇವರು ಸಾಽಸಿ ತೋರಿಸಿದ್ದಾರೆ ಎಂದು ತಿಳಿಸಿದರು.

ಎನ್.ಎಸ್.ಎಸ್. ಘಟಕ ೨ರ ಅಽಕಾರಿ ಎಚ್.ಜಿ.ಗೌಡರ ಗಾಂಽÃಜಿ ಹಾಗೂ ಶಾಸ್ತ್ರೀ ಅವರ ಬದುಕು-ಬರಹ ಕುರಿತು ಮಾತನಾಡಿದರು. ಉಪನ್ಯಾಸಕಿ ಕೀರ್ತಿ ದಾಸರ ಭಜನ್ ಸಾದರ ಪಡಿಸಿದರು. ಉಪನ್ಯಾಸಕರಾದ ಎ.ಎ.ಗಂಗಲ್, ಎನ್.ಎಚ್.ಹವಾಲ್ದಾರ, ಎಸ್.ಎಂ ಜೇವೂರ, ಎಸ್.ಎಸ್.ಕುಲಕರ್ಣಿ, ಡಿ.ಎಚ್.ಬಿರಾದಾರ, ಎಂ.ಜೆ.ಬೆನಕಟ್ಟಿ, ವೈ.ಎಚ್.ಗುಡೂರ ಹಾಗೂ ರಾಜು ಚವ್ಹಾಣ,ಬಿ.ಎಲ್.ಬೇಡರಟ್ಟಿ ಇದ್ದರು. ಎನ್.ಎಸ್.ಎಸ್. ಘಟಕ ೧ರ ಅಽಕಾರಿ ಎನ್.ಬಿ.ಹಸಬಿ ಪ್ರತಿಜ್ಞಾವಿಽ ಬೋಽಸಿದರು. ಉಪನ್ಯಾಸಕ ಕೃಷ್ಣ ಲಮಾಣಿ ನಿರೂಪಿಸಿದರು. ಬಿ.ಡಿ.ಮಾದರ ವಂದಿಸಿದರು.

ಕಸಾಪದಿಂದ ಆಚರಣೆ..
ಬಾಗಲಕೋಟೆ: ನವನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಕಸಾಪ ಜಿಲ್ಲಾ ಘಟಕದಿಂದ ಮಹಾತ್ಮ ಗಾಂಽÃಜಿ ಹಾಗೂ ಲಾಲ್ ಬಹೂದ್ಧೂರ್ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಸತ್ಯ, ಶಾಂತಿ, ಅಹಿಂಸೆ ಮಂತ್ರಗಳನ್ನು ಜಪಿಸಿ, ಸತ್ಯವೇ ದೇವರು ಎಂದು ದೃಢವಾಗಿ ನಂಬಿದ್ದ ಗಾಂÃಜಿಯವರ ನಿಷ್ಠೆ ಹಾಗೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರಳತೆಯಿಂದ ಬದುಕಿನ ಮಾಜಿ ಪ್ರಧಾನಿ ಲಾಲ್ ಬಹೂದ್ಧೂರ್ ಶಾಸ್ತ್ರೀಜಿ ಅವರ ಜೀವನದ ಮೌಲ್ಯಗಳನ್ನು ನಾವು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಕಲಾದಗಿ ಹಣ್ಣು ಬೆಳಗಾಗರ ಸಂಘದ ಅಧ್ಯಕ್ಷ ಕೆ.ಟಿ.ಪಾಟೀಲ, ಸಾಂಸ್ಕೃತಿಕ ಚಿಂತಕ ಸಿದ್ಧು ಬೂದಿಹಾಳ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಮಾಜ ಸೇವಕರಾದ ವಿರೂಪಾಕ್ಷಗೌಡ ಪಾಟೀಲ, ಕಸ್ತೂರಿ ಹಳ್ಳೂರ, ಡಿ.ಪಿ ಅಮಲಝರಿ, ಬಸವರಾಜ ಯಡಹಳ್ಳಿ, ಜಿ.ಎಸ್. ಗೊಂಬಿ, ಡಾ.ಚಂದ್ರಶೇಖರ ಕಾಳನ್ನವರ ಉಪಸ್ಥಿತರಿದ್ದರು. ಕಲಾವಿದರಾದ ಪವಿತ್ರಾ ಜಕ್ಕಪ್ಪನವರ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು. ಜಿ.ಎಸ್. ನಾಗನೂರು ಸ್ವಾಗತಿಸಿದರು. ಶಂಕರ ಹೂಲಿ ವಂದಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು
ಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸಭಾಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಽÃಜಿ ಹಾಗೂ ಶಾಸಿöÃ ಜಯಂತಿ ಕಾರ್ಯಕ್ರಮ ಜರುಗಿತು.

ಬಸವೇಶ್ವರ ಇಂಜಿನಿಯರಿಂಗ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಹಿರೇಮಠ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವಿ.ಬಿ.ಪಾಗಿ, ಸಾಂಸ್ಕೃತಿಕ ಸಂಯೋಜಕ ಡಾ.ಮಂಜುಳಾ ಸುತಗುಂಡಾರ, ಡಾ.ಕಿರಣಕುಮಾರ ಬಳುವಲದ, ಡಾ.ಭಾರತಿ ಮೇಟಿ, ಕಾಲೇಜಿನ ಪರೀಕ್ಷಾ ನಿಯಂತ್ರಣಾಽಕಾರಿ ಡಾ. ಕೆ .ಚಂದ್ರಶೇಖರ, ಡೀನ್ ಡಾ.ಪಿ.ಎನ್.ಕುಲಕರ್ಣಿ ಇತರರು ಇದ್ದರು.

ನವನಗರ ಸ.ಪ್ರ.ದ.ಕಾಲೇಜು

ಬಾಗಲಕೋಟೆ: ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ಮಹಾತ್ಮ ಗಾಂಽÃಜಿ ಹಾಗೂ ಶಾಸಿöÃ ಜಯಂತಿ ಆಚರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ, ಡಾ.ಚಂದ್ರಶೇಖರ ಕಾಳನವನರ ಇತರರು ಇದ್ದರು.

ತೋವಿವಿಯಲ್ಲಿ
ಬಾಗಲಕೋಟೆ: ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಽÃಜಿ ಹಾಗೂ ಲಾಲ್ ಬಹದ್ದೂರ ಶಾಸಿö ಜಯಂತಿ ಆಚರಿಸಲಾಯಿತು.
ವಿಶ್ವ ವಿದ್ಯಾಲಯದ ಕುಲಪ ಡಾ.ವಿಷ್ಣುವರ್ಧನ ಮಾತನಾಡಿ, ಕೇವಲ ಕಾಟಾಚಾರಕ್ಕಾಗಿ ಜಯಂತಿ ಆಚರಿಸದೆ ಪ್ರತಿಯೊಬ್ಬರು ಸಂಸ್ಕಾರ, ಸತ್ಯ ಮತ್ತು ಅಹಿಂಸೆ ತತ್ವಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಜಯಂತಿಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣ ನಿರ್ದೇಶಕ ಡಾ. ಎನ್.ಕೆ.ಹೆಗಡೆ, ಡೀನ್ ಡಾ.ಲಕ್ಷಿ÷್ಮÃನಾರಾಯಣ ಹೆಗಡೆ, ಮಹಾವಿದ್ಯಾಲಯದ ಡೀನ್ ಡಾ. ಬಾಲಾಜಿ ಕುಲಕರ್ಣಿ, ಆಸ್ತಿ ಅಽಕಾರಿ ವಿಜಯಭಾಸ್ಕರ ಎಂ. ಭಜಂತ್ರಿ, ಆಡಳಿತಾಽಕಾರಿ ಆರ್.ವೈ.ಕಾಂಬಳೆ, ಡಾ.ಜೆ.ಬಿ.ಗೋಪಾಲಿ, ಡಾ.ಆರ್. ಎಂ.ಹಿರೇಮಠ, ಡಾ. ಸತೀಶ ಪಾಟೀಲ, ಡಾ.ಐ. ಬಿ. ಬಿರಾದಾರ, ಡಾ. ಈ ರಾಜಶೇಖರ, ಡಾ. ನೂರುಲ್ಲಾ ಹಾವೇರಿ, ಡಾ. ಗಿರೀಜಾ ಯಂಡಿಗೇರಿ ಇತರರು ಇದ್ದರು. ಕೀರ್ತಿ ಸ್ವಾಗತಿಸಿದರು. ಆಕಾಶ ವಂದಿಸಿದರು. ಬಸವರಾಜೇಶ್ವರಿ ನಿರೂಪಿಸಿದರು.

ಕಲಾ ಮಹಾವಿದ್ಯಾಲಯ
ಬಾಗಲಕೋಟೆ: ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗಾಂಽ ಭಜನೆ ಮಾಡುವುದರ ಮೂಲಕ ವಿಶಿಷ್ಠ ರೀತಿಯಲ್ಲಿ ಗಾಂಽ ಜಯಂತಿ ಆಚರಣೆ ಮಾಡಲಾಯಿತು.
ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಽÃಜಿ ಮತ್ತು ಲಾಲ ಬಹಾದ್ದೂರ ಶಾಸಿö ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಹಾವಿದ್ಯಾಲಯದ ಸಂಗೀತ ವಿಭಾಗ ಹಾಗೂ ವಿದ್ಯಾರ್ಥಿಗಳು ಭಜನೆ ಮಾಡುವುದರ ಮೂಲಕ ರಘುಪತಿ ರಾಘವ, ವೈಷ್ಣವ ಜನತು ಸೇರಿದಂತೆ ವಿವಿಧ ಗಾಂಽÃಜಿ ಕುರಿತಾದ ಹಾಡುಗಳನ್ನು ಹಾಡಿದರು.
ಪ್ರಾಚಾರ್ಯ ಎಸ್. ಆರ್ ಮಗನೂರಮಠ, ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ. ಕೆ.ವಿ ಮಠ, ಆರ್.ಎಂ.ಬೆಣ್ಣೂರ, ಶ್ರೇಯಾ ಜೋರಾಪುರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net