ಕೋಟೆನಾಡಲ್ಲಿ ಉತ್ತಮ ವರ್ಷಧಾರೆ

bkt-26-11
ಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯ
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದ ಬೆನ್ನಲ್ಲೆ ಇದೀಗ ಮುಂಗಾರು ಮಳೆ ಪ್ರವೇಶವಾಗಿದ್ದು, ಎರಡು ದಿನಗಳಿಂದಲೂ ಮಳೆ ಆಗುತ್ತಿದೆ. ಸೋಮವಾರ ಇಡೀ ದಿನ ಜಿಟಿಜಿಟಿಯಾಗಿ ಮಳೆ ಆಗಿದೆ.

ಮಹಾರಾಷ್ಟçದಲ್ಲೂ ಮಳೆ ಅಬ್ಬರ ಶುರುವಾಗಿದ್ದರಿಂದ ಕೃಷ್ಣಾ ನದಿಗೆ ಮೇ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸೋಮವಾರ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ೨೪೫೦೮ ಕ್ಯೂಸೆಕ್ ಒಳಹರಿವು ಇತ್ತು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಹಿನ್ನೆಲೆಯಲ್ಲಿ ಹಿಪ್ಪರಗಿ ಜಲಾಶಯದಿಂದ ೪೨೩೩೨ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾಗೆಯೇ ಆಲಮಟ್ಟಿ ಜಲಾಶಯಕ್ಕೂ ಸಹ ಸೋಮವಾರ ೫೨೬೫೦ ಕ್ಯೂಸೆಕ್ ಒಳಹರಿವು ಇತ್ತು. ಇದರಿಂದ ರೈತರಿಗೆ ಹರ್ಷ ತಂದಿದೆ.

೬ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯೆದ ಹಿಪ್ಪರಗಿ ಜಲಾಶಯದಲ್ಲಿ ಸೋಮವಾರ ೨.೨೮ ಟಿಎಂಸಿ ನೀರು (ಶೇ.೩೮) ಸಂಗ್ರಹವಾಗಿದೆ.ಹಾಗೆಯೇ ೧೨೩ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯೆದ ಆಲಮಟ್ಟಿ ಜಲಾಶಯದಲ್ಲಿ ೩೧.೭೮೫ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮೇ ೨೬ ರಂದು ಆಲಮಟ್ಟಿಯಲ್ಲಿ ೨೪.೪೬ ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಸಲ ಜೂನ್ ತಿಂಗಳು ಮೊದಲೇ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆ ಸೇರಿದಂತೆ ನೀರಾವರಿ ಅಲವಂಬಿತ ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ.

ಮೇ ತಿಂಗಳು ಜಿಲ್ಲೆಯಲ್ಲಿ ವಾಡಿಕೆಯಂತೆ ೪ ಮಳೆ ದಿನಗಳು ಇದ್ದವು. ಆದರೆ, ಪ್ರಸಕ್ತ ವರ್ಷ ಈಗಾಗಲೇ ೧೦ ದಿನಗಳು ಸುರಿದಿದ್ದು, ಈ ತಿಂಗಳು ಅಂತ್ಯದ ವರೆಗೂ ಜಿಲ್ಲೆಯಲ್ಲಿ ಗಾಳಿಯ ಜೊತೆಗೆ ಹಲವಡೆ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಬೆಳಗಾವಿ ಮತ್ತು ಮಹಾರಾಷ್ಟçದ ಕೃಷ್ಣಾ ಜಲಾನಯದ ಪ್ರದೇಶದಲ್ಲೂ ಸಹ ಉತ್ತಮ ಮಳೆ ಆರಂಭವಾಗಿದ್ದರಿAದ ಕೃಷ್ಣ, ಘಟಪ್ರಭ, ಮಲಪ್ರಭ ನದಿಗಳಿಗೆ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಹೆಚ್ಚಿದೆ. ಪ್ರತಿ ವರ್ಷ ನದಿಗಳಿಗೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿತ್ತು.

ಇನ್ನು ದಶಕಗಳ ಸರಾಸರಿ ನೋಡಿದರೆ ಜಿಲ್ಲೆಯಲ್ಲಿ ಒಟ್ಟು ೬೪ ಮಳೆ ದಿನಗಳು ಒಳಗೊಂಡAತೆ ೫೮೩ ಎಂಎA ಮಳೆ ಆಗುತ್ತದೆ. ಅದರಲ್ಲೂ ಮುಂಗಾರಿನ ಹಂಗಾಮಿನಲ್ಲಿ ೪೮ ಮಳೆಯ ದಿನಗಳು ಇರುತ್ತವೆ. ಜೂನ್ ತಿಂಗಳಲ್ಲಿ ೧೦ ದಿನಗಳು, ಜುಲೈ ೧೧ ದಿನಗಳು, ಆಗಸ್ಟ್ ೧೧ ದಿನಗಳು ಹಾಗೂ ಸೆಪ್ಟಂಬರ್‌ನಲ್ಲಿ

೧೬ ದಿನ ಮಳೆ ಆಗುವುದು ವಾಡಿಕೆ.

ಈ ವರ್ಷ ಮುಂಗಾರು ಬೇಗನೆ ಆಗಮಿಸಿರುವುದರಿಂದ ಅದರಲ್ಲೂ ವಿಶೇಷವಾಗಿ ಮೇ ತಿಂಗಳಲ್ಲಿ ಸರಾಸರಿ ೪ ಮಳೆ ದಿನಗಳು ಇದ್ದು, ಈಗಾಗಲೇ ೧೦ ದಿನ ಮಳೆ ಆಗಿದೆ. ಇದರಿಂದ ಮುಂಬರುವ ತಿಂಗಳಲ್ಲಿ ಮಳೆ ದಿನಗಳು ಮತ್ತು ಮಳೆ ಸುರಿಯುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಉತ್ತಮವಾದ ಬೆಳೆ ಮತ್ತು ಉತ್ಪನ್ನಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ಶಾಸöಜ್ಞ ಡಾ.ಪ್ರವೀಣ ಗುಳೇದ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net