ಕೋಟೆನಗರಿಯಲ್ಲಿ ಸೈಕಲ್ ಜಾಥಾ

bkt-7-9
ಬಾಗಲಕೋಟೆ ಜಿಲ್ಲಾ ಅರ್ಥೋಪಿಡಿಕ್ ಅಸೋಶಿಯನ್ಸ್ ವತಿಯಿಂದ ರಾಷ್ಟ್ರೀಯ ಮೂಳೆ ಹಾಗೂ ಕೀಲು ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಬಾಗಲಕೋಟೆ ಜಿಲ್ಲಾ ಅರ್ಥೋಪಿಡಿಕ್ ಅಸೋಶಿಯನ್ಸ್ ಅಧ್ಯಕ್ಷ ಎಚ್.ಆರ್.ಕಟ್ಟಿ, ಡಾ.ವಿ.ಆರ್.ಸೋರಗಾಂವಿ ಉದ್ಘಾಟಿಸಿದರು.
Published on

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಅರ್ಥೋಪಿಡಿಕ್ ಅಸೋಶಿಯನ್ಸ್ ವತಿಯಿಂದ ರಾಷ್ಟ್ರೀಯ ಮೂಳೆ ಹಾಗೂ ಕೀಲು ದಿನಾಚರಣೆ ಅಂಗವಾಗಿ ಕೋಟೆನಗರಿಯಲ್ಲಿ ಸೋಮವಾರ ಸೈಕಲಿಸ್ಟ್ಗಳು ಸೈಕಲ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ಕಾಳಿದಾಸ ಸರ್ಕಲ್ ದಿಂದ ಆರಂಭವಾದ ಸೈಕಲ್ ಜಾಥಾ ವಿದ್ಯಾಗಿರಿ ಸರ್ಕಲ್ ಮಾರ್ಗವಾಗಿ ಬಾಗಲಕೋಟೆಯ ಬಸವೇಶ್ವರ ಸರ್ಕಲ್ ತಲುಪಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ೧೦೦ ಕ್ಕೂ ಹೆಚ್ಚು ಸೈಕಲಿಸ್ಟಗಳು ಭಾಗವಹಿಸಿದ್ದರು. ನಂತರ ಬಸ್ ನಿಲ್ದಾಣದಲ್ಲಿ ಡಾ.ರವೀಂದ್ರ ಒಣಕಿ ಅಣುಕು ಪ್ರದರ್ಶನ ಮಾಡಿ ಅಪಘಾತ ಸಂದರ್ಭದಲ್ಲಿ ಜೀವ ರಕ್ಷಣೆ ಪಡೆಯುವುದು ಹೇಗೆ ಎನ್ನುವುದು ಕುರಿತು ಅರಿವು ಮೂಡಿಸಿದರು.

ಬಾಗಲಕೋಟೆ ಜಿಲ್ಲಾ ಅರ್ಥೋಪಿಡಿಕ್ ಅಸೋಶಿಯನ್ಸ್ ಅಧ್ಯಕ್ಷ ಎಚ್.ಆರ್.ಕಟ್ಟಿ, ಡಾ.ವಿ.ಆರ್.ಸೋರಗಾಂವಿ, ಡಾ.ಗಿರೀಶ ನಾಯಕವಾಡಿ, ಡಾ.ನಾಗೇಶ ಸಣಕಲ್ಲ, ಡಾ.ಗಿರೀಶ ಮೇಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net