ಕೋಟೆನಗರಿಯಲ್ಲಿ ಸಂಭ್ರಮದ ಮೊಹರಂ

bkt-6-2
ಬಾಗಲಕೋಟೆ ನಗರದಲ್ಲಿ ಹುಲಿವೇಷಧಾರಿಗಳು ಜನರ ಹೆಗಲಮೇಲೆ ನಿಂತುಕೊAಡು ಹೆಜ್ಜೆ ಕುಣಿದ ಪರಿ
Published on

ಬಾಗಲಕೋಟೆ: ನಗರದಲ್ಲಿ ಮೊಹರಂ ಹಬ್ಬ ಅತ್ಯಂತ ವಿಜೃಂಭಣೆಯಿAದ ನಡೆಯಿತು. ನಗರದ ಗಲ್ಲಿ ಗಲ್ಲಿಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಭಾನುವಾರ ಬೆಳಗ್ಗೆಯಿಂದಲೇ ಮೆರವಣಿಗೆ ವಾದ್ಯಗಳ ಮುಖಾಂತರ ಸಾಗಿದವು. ಮಧ್ಯಾಹ್ನದ ವೇಳೆಗೆ ವಲ್ಲಾಬಾಯಿ ಚೌಕ್ ಹತ್ತಿರ ಅಲಾಯಿ ದೇವರು ಸಮಾಗಮಗೊಂಡವು. ಈ ವೇಳೆ ಧಾರ್ಮಿಕ ವಿಽವಿಧಾನಗಳನ್ನು ತಾಶ್ಯಾ ಭಾರಿಸುವ ಮೂಲಕ ನೆರವೇರಿಸಲಾಯಿತು.

ಅಲಾಯಿ ದೇವರ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಇಷ್ಟಾರ್ಥ ಸಿದ್ದಿಗಾಗಿ ಹರಿಕೆ ಹೊತ್ತಿದ್ದ ಭಕ್ತರು ಹುಲಿವೇಷದ ಕಪ್ಪು ಹಳದಿ ಬಣ್ಣ ಮೈಗೆ ಹಚ್ಚಿಕೊಂಡು ಹುಲಿ ಹೆಜ್ಜೆ ಹಾಕುತ್ತಿದ್ದರು. ನಗರದ ವಿವಿಧೆಡೆ ಆಕರ್ಷಕ ವಾದ್ಯವೈಭವಗಳೊಂದಿಗೆ ಸಾಗಿದ ಮೆರವಣಿಗೆ ನೋಡಲು ಮಾರ್ಗದುದ್ದಕ್ಕೂ ಜನರು ತಂಡೋಪ ತಂಡವಾಗಿ ನೆರೆದಿದ್ದರು.

ಊದು ಹಾಕುವುದು, ಸಕ್ಕರೆ, ಕೊಬ್ಬರಿ, ಲೋಹದ ಕುದರೆ, ಬಟ್ಟೆಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿ ಹರಿಕೆ ತೀರಿಸಿದರು. ಎಲ್ಲೆಂದರಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರು ದೂಲಾ.. ದೂಲಾ.. ಎಂದು ಘೋಷಣೆ ಕೂಗು ಮೊಳಗಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅನೇಕರು ಅಲಾಯಿ ದೇವರಿಗೆ ಭಕ್ತಿಯ ಕಾಣಿಕೆ, ನೈವೇದ್ಯ ಅರ್ಪಿಸಿ ಪ್ರಾರ್ಥಿಸಿಕೊಳ್ಳುತ್ತಿದ್ದರು. ಅಲಾಯಿ ದೇವರ ವಿಸರ್ಜನೆ ಮಾಡುವ ಮೂಲಕ ಹಿಂದೂ -ಮುಸ್ಲಿಂ ಭಾವೈಕ್ಯೆ ಸಾರುವ ಮೊಹರಂ ಹಬ್ಬ ನಗರದಲ್ಲಿ ಸಂಭ್ರಮದ ತೆರೆ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net