ಕೋಟೆನಗರಿಯಲ್ಲಿ ಭವ್ಯ ಮೆರವಣಿಗೆ

bkt-20-1 c (4)
ಬಾಗಲಕೋಟೆ ನಗರದಲ್ಲಿ ಗ್ರಾಮ ದೇವತೆ ಜಾತ್ರೆಯ ಮೆರವಣಿಗೆಯ ಝಲಕ್..
Published on

ಬಾಗಲಕೋಟೆ: ಗ್ರಾಮ ದೇವತೆ, ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕೋಟೆನಗರಿ ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ಭವ್ಯ ಮೆರವಣಿಗೆ ಆಕರ್ಷಕವಾಗಿತ್ತು, ಸಹಸ್ರಾರು ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಅಕ್ಷರಶಃ ಮುಳಗಡೆ ನಗರಿ ವೈಭವ ಕಣ್ಣನೆ ಸೆಳೆಯುವಂತಿದೆ.

ಬೆಳಗ್ಗೆ ಕಿಲ್ಲಾ ಗಲ್ಲಿನ ಗ್ರಾಮ ದೇವತೆಯ ಆವರಣದಲ್ಲಿ ಅಲಂಕೃತಗೊAಡ ವಾಹನದಲ್ಲಿ ದೇವಿಯರ ಮೂರ್ತಿ ಕೂರಿಸುತ್ತಿದ್ದಂತೆ ಕೇ ಕೇ, ಚಪ್ಪಾಳೆಗಳು ಮುಗಿಲು ಮುಟ್ಟಿದವು. ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ, ಜಾತ್ರಾ ಸಮಿತಿ ಗೌರವ ಅಧ್ಯಕ್ಷ ಬಸವಪ್ರಭು ಸರನಾಡಗೌಡ ಭವ್ಯ ಮೆರವಣಿಗೆ ಚಾಲನೆ ನೀಡಿದರು.

ಬಳಿಕ ಕೊತ್ತಲೇಶ ದೇವಸ್ಥಾನ, ಪಂಕಾ ಮಸೀದಿ, ಜೈನಪೇಟ, ಕುಂಬಾರಮಡು, ಹಳಪೇಟ, ಶಾರದಾ ಪ್ರೇಸ್, ಟೀಕಿನಮಠ, ಪಶು ಆಸ್ಪತ್ರೆ, ಕಾಲೇಜು ರಸ್ತೆ, ಬಿವಿವಿ ಸಂಘ, ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ವಲ್ಲಭಾಯಿ ಚೌಕ, ಟಾಂಗಾ ಸ್ಟ್ಯಾಂಡ್ ಮೂಲಕ ಮರಳಿ ಸ್ವ ಸ್ಥಾನ ತಲುಪಿತು.

ಕೃತಕ, ಯಂತ್ರ ಚಾಲಿತ ಆನೆ ಮುಂದೆ ಸಾಗುತ್ತಿದ್ದಂತೆ ನೆರೆದವರು ಸಂಭ್ರಮಿಸಿದರು. ನಿಜದಂತೆ ಕಾಣುತ್ತಿದ್ದ ಆನೆ ಆಶೀರ್ವಾದ ಮಾಡುತ್ತಲೆ ಸಾಗಿದ್ದು, ಮೆರವಣಿಗೆಯಲ್ಲಿ ಆಕರ್ಷಣೀಯ ಕೇಂದ್ರ ಬಿಂದುವಾಗಿತ್ತು. ಝಾಂಝ್ ಪತಾಕ್, ಪೋತರಾಜರ ಕಲಾ ತಂಡ, ವೀರಗಾಸೆ ಕುಣಿತ, ಚಂಡಿವಾದ್ಯ, ಡೊಳ್ಳುವಾದನ, ಜಗ್ಗಲ ಮೇಲ, ಉಡುಪಿ ಚಂಡಿ ಮದ್ದಳೆಯ ನಾದ, ಹುಲಿ ಹಾಗೂ ಗೊಂಬೆ ಕುಣಿತ ಜಾತ್ರಾ ಮಹೋತ್ಸವಕ್ಕೆ ಕಳೆಗಟ್ಟಿದ್ದವು. ವಿರಾಜಮಾನರಾಗಿ ಸಾಗುತ್ತಿದ್ದ ದೇವಿ ಮೂರ್ತಿಯ ಜೊತೆಗೆ ಸುಮಂಗಲಿಯರು ಕುಂಭ ಹೊತ್ತು ಸಾಗಿದರು.

ಅಲ್ಲದೇ ಅಪಾರ ಪ್ರಮಾಣದಲ್ಲಿ ಭಂಡಾರ ಎರಚಿ ಸಾಗುತ್ತಿದ್ದ ಭಕ್ತ ಸಮೂಹ ಜಯ ಘೋಷಣೆ ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಬಂಧು, ಮಿತ್ರರನ್ನು ಆಗಮಿಸಿದ್ದು, ಪ್ರತಿಯೊಬ್ಬರ ಮನೆ, ಮನದಲ್ಲಿ ಸಂತಸ ಮನೆ ಮಾಡಿದೆ. ಬಾಗಲಕೋಟೆ ನಗರ ಅಕ್ಷರಶಃ ಮಧುವನ ಗಿತ್ತಿಯಂತೆ ಶೃಂಗಾರಗೊAಡಿದ್ದು, ಎಲ್ಲಡೆ ಕೌಟಟ್, ಬ್ಯಾನರ್, ಸ್ವಾಗತ ಕಮಾನು ರಾರಾಜಿಸುತ್ತೀವೆ. ಭಕ್ತಿ ಗೀತೆ, ಜಾನಪದ ಸಂಗೀತ ಇಂಬು ನೀಡಿತು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡ, ಅಧ್ಯಕ್ಷ ಬಂಡೆರಾವ ಸರದೇಸಾಯಿ, ಉಪಾಧ್ಯಕ್ಷ ಅಶೋಕ ಲಿಂಬಾವಳಿ,ನಾಗರಾಜ್ ಹದ್ಲಿ, ಗುಂಡೂರಾವ್ ಶಿಂಧೆ, ಸಂತೋಷ ಹೊಕ್ರಾಣಿ, ಶ್ರೀನಿವಾಸ ಸಜ್ಜನ, ಸಂಗಯ್ಯ ಸರಗಣಾಚಾರಿ, ರಾಜೇಂದ್ರ ಬಳೂಲಮಠ, ಉಮೇಶ್ ಪೂಜಾರ, ಸುರೇಶ್ ಮಜ್ಜಗಿ, ಬಸಪ್ಪ ಸ್ವಾಗಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net