ಕೋಟೆನಗರಿಯಲ್ಲಿ ಬಿಜೆಪಿ ಪ್ರಭಾತ ಪೇರಿ

bkt-9-6
ಬಾಗಲಕೋಟೆ ನಗರದಲ್ಲಿ ಬಿಜೆಪಿ ವತಿಯಿಂದ ಪ್ರಭಾತ ಪೇರಿ ಜರುಗಿತು. ಶಾಸಕ ವೀರಣ್ಣ ಚರಂತಿಮಠ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಮುಖಂಡರಾದ ಜಯಂತ ಕುರಂದವಾಡ, ಸತ್ಯನಾರಾಯಣ ಹೇಮಾದ್ರಿ, ರಾಜು ನಾಯಕರ, ಈಶಪ್ಪ ಕೋಲಾರ್, ಲಕ್ಷ್ಮೀ ನಾರಾಯಣ ಕಾಸಟ್, ನಿವೃತ ಸೈನಿಕರಾದ ಭೀಮಪ್ಪ ಕಿಚಡಿ, ಯಮನಪ್ಪ ಕಂದಗಲ್, ಮಲ್ಲು ಗಿರಗಾವಿ, ಉಮೇಶ್ ತೇಲ್ಕರ್ ಇದ್ದರು.
Published on

ಬಾಗಲಕೋಟೆ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ವತಿಯಿಂದ ಮಂಗಳವಾರ ಕೋಟೆನಗರಿಯ ವಾರ್ಡ ನಂಬರ್ 7 ಹಾಗೂ 10 ರಲ್ಲಿ ಹಮ್ಮಿಕೊಂಡಿದ್ದ ಪ್ರಭಾತ ಪೇರಿಗೆ ನಿವೃತ ಸೈನಿಕ ಭೀಮಪ್ಪ ಕಿಚಡಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, 75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದಾರೆ. ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ದೇಶ ಪ್ರೇಮ ಸಾಕ್ಷಿ ಕರಿಸಬೇಕು. ಯುವ ಪೀಳಿಗೆ ಜನರಿಗೆ ದೇಶ ಪ್ರೇಮದ ಭದ್ರ ಬುನಾದಿ ಹಾಕಬೇಕು ಎಂದು ಹೇಳಿದರು.
ಮೋದಿ ಅವರು ದೇಶದ ಪ್ರಧಾನಿಯಾಗಿ ಆಡಳಿತದ ಚುಕ್ಕಾಣೆ ಹಿಡಿದು 8 ವರ್ಷದಲ್ಲಿ ದೇಶ ಚಿತ್ರಣ ಬದಲಾಗಿದೆ. ವಿಶ್ವದಲ್ಲಿ ಭಾರತದ ಸ್ಥಾನಮಾನ ಉನ್ನತ ಮಟ್ಟಕ್ಕೆ ಏರಿದೆ. ಸೈನಿಕರನ್ನು ಗೌರವದಿಂದ ಕಾಣಲಾಗುತ್ತಿದೆ. ಇವತ್ತು ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶದ ಗಡಿಯನ್ನು ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಮುಖಂಡರಾದ ಜಯಂತ ಕುರಂದವಾಡ, ಸತ್ಯನಾರಾಯಣ ಹೇಮಾದ್ರಿ, ರಾಜು ನಾಯಕರ, ಈಶಪ್ಪ ಕೋಲಾರ, ಲಕ್ಷ್ಮೀ ನಾರಾಯಣ ಕಾಸಟ್, ನಿವೃತ್ತ ಸೈನಿಕರಾದ ಯಮನಪ್ಪ ಕಂದಗಲ್, ಮಲ್ಲು ಗಿರಗಾವಿ, ಉಮೇಶ ತೇಲಕರ, ನಗರಸಭೆ ಸದಸ್ಯರಾದ ಶಶಿಕಲಾ ಮಜ್ಜಗಿ ಹಿರಲಾಲ್ ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net