ಕೋಟೆನಗರಿಯಲ್ಲಿ ಗಣೇಶ ಉತ್ಸವ

05a3cb17-8750-4701-9788-f9e4ac91c3e5
ಬಾಗಲಕೋಟೆ ನಗರದಲ್ಲಿ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿರುವುದು.
Published on

ಬಾಗಲಕೋಟೆ: ಗಣೇಶ ಉತ್ಸವದ ಸಂಭ್ರಮ ಸಡಗರ ಬಾಗಲಕೋಟೆ ನಗರದಲ್ಲಿ ಜೋರಾಗಿಯೆ ನಡೆಯಿತು. ಮಂತ್ರಘೋಷಗಳ ನಡುವೆ ಅಂದಾಜು ೧೮೦ ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.

ನಗರ, ವಿದ್ಯಾಗಿರಿ, ನವನಗರದ ಗಣೇಶ ಉತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಗಲ್ಲಿ, ಗಲ್ಲಿ, ಪ್ರಮುಖ ಬೀದಿಗಳಲ್ಲಿ ಹಬ್ಬದ ಸಂತಸ ಇಮ್ಮಡಿಕೊಂಡಿತ್ತು. ಕೆಲ ಬಡಾವಣೆಗಳಲ್ಲಿ ಸಂಜೆ ೬ ಗಂಟೆ ನಂತರವೂ ಸಾರ್ವಜನಿಕರ ಗಣೇಶ ಪ್ರತಿಷ್ಠಾಪನಾ ಮೆರವಣಿಗೆ ನಡೆದವು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದರು. ಮಾರುಕಟ್ಟೆ ಪ್ರದೇಶದಲ್ಲಿ ಟ್ರಾಫಿಕ್ ಜಾಮ ಕಿರಿಕಿರಿತು ಉಂಟು ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net