

ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಚ್.ವೈ.ಮೇಟಿ ಪರ ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಘಟಕದ ಮುಖಂಡರು ನಗರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ.
ನಗರದ ವಿದ್ಯಾಗಿರಿ ಬಡಾವಣೆಯ ಜ್ಯೋತಿ ಕಾಲೋನಿ, ತೆಗ್ಗಿ ಲೇಔಟ ಕಾಲೋನಿಗಳಲ್ಲಿ ಭರ್ಜರಿ ಮತ ಬೇಟೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಸಾರ್ವಜನಿಕರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ ಬಿಜೆಪಿ ದುಬಾರಿ ಸರ್ಕಾರ, ಕಾಂಗ್ರೆಸ್ ಜನ ಸಾಮಾನ್ಯರ ಸರ್ಕಾರ. ಈ ಸಾರಿ ಕಾಂಗ್ರೆಸ್‌ಗೆ ಮತ ನೀಡಿ ನೆಮ್ಮದಿ ಬದುಕು ಸಾಗಿಸಿ ಅಂತ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಮಾತನಾಡಿ, ಬಿಜೆಪಿ ಸರ್ಕಾರ ಕಳೆದ ೪ ವರ್ಷದಲ್ಲಿ ಬರೀ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಕೋವಿಡ್‌ನಿಂದ ಜನ ತತ್ತರಿಸಿದ್ದರು ಯಾವುದೇ ಸಹಾಯ ಮಾಡಲಿಲ್ಲ. ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ ಧ್ವನಿ ಎತ್ತದಂತೆ ಮಾಡಿದರು. ಅಲ್ಲಿಯೂ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದರು. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದರು. ಸರ್ಕಾರಿ ನೌಕರಿ ದೊರೆಯುವ ವಿಶ್ವಾಸದಲ್ಲಿದ್ದ ಯುವ ಜನ ಕಣ್ಣೀರು ಹಾಕುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿಗೆ ಆದ್ಯತೆ ನೀಡಿತ್ತು. ಈಗಿನ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿ ಬರೀ ಸುಳ್ಳುವ ಭರವಸೆ ನೀಡಿ ಜನರಿಗೆ ವಂಚನೆ ಮಾಡುತ್ತದೆ. ಯುಪಿಎ ಸರ್ಕಾರ ಅವಽಯಲ್ಲಿ ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಲಾಯಿತು. ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಮಹಿಳಿಗೆ ಶೇ.೫೦ ಮೀಸಲಾತಿ ಕಲ್ಪಿಸುವ ಮೂಲಕ ಮಹಿಳಾ ಆಡಳಿತಕ್ಕೆ ಅವಕಾಶ ನೀಡಿತು. ಇಂದು ಆರ್‌ಟಿಇ ಕಾಯ್ದೆಯಿಂದಾಗಿ ಬಡವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಯಿತು. ಇಂದು ಈ ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಸೀಟ್ ದೊರೆಯುತ್ತಿಲ್ಲ. ಹೀಗಾಗಿ ಬದಲಾವಣೆಗಾಗಿ ಕಾಂಗ್ರೆಸ್ ಬೆಂಬಲಿಸಬೇಕು. ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಎಚ್.ವೈ.ಮೇಟಿ ಅವರ ಅಭಿವೃದ್ಧಿ ಪರ ಆಡಳಿತಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ದೇಶಕ್ಕೆ ಹಿತ, ವೋಟ್ ಫಾರ್ ಕಾಂಗ್ರೆಸ್, ನಾಡಿನ ನೆಮ್ಮದಿ, ಶಾಂತಿಗಾಗಿ ಕೈಗೆ ಕೈ ಜೋಡಿಸಿ ಅಂತ ಘೋಷಣೆ ಕೂಗಿದರು. ಮುಖಂಡರಾದ ಹನುಮಂತ ಭಜಂತ್ರಿ, ರೇಣುಕಾ ನ್ಯಾಮಗೌಡ, ಸಂಗಮೇಶ ದೊಡ್ಡಮನಿ, ಭರಮು ಪೂಜಾರಿ, ಅಬ್ದುಲ್ ರಜಾಕ್ ಬೆಣ್ಣೂರ, ಮಂಜುಳಾ ಭೂಸಾರೆ, ಕಲಾವತಿ ನ್ಯಾಮಗೌಡ ಇದ್ದರು.