

ಬಾಗಲಕೋಟೆ: ಕನ್ನಡದ ನಂ.೧ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ ಸಂಸ್ಥೆ ವತಿಯಿಂದ ಗ್ರಾಹಕರಿಗೆ ಉಚಿತ ಹೇರ ಕಲರಿಂಗ್ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದ್ದು, ಬುಧವಾರ ಕೋಟೆನಗರಿಯಲ್ಲಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.
ದೇಶದ ಖ್ಯಾತ ಹೇರ ಕಲರಿಂಗ ಸಂಸ್ಥೆಯಾದ ಗಾರ್ನಿಯರ ಈ ಅಭಿಯಾನಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದು. ಸಂಸ್ಥೆಯ ನುರಿತ ಹೇರ ಕಲರಿಂಗ ಪರಿಣಿತರು ಗ್ರಾಹಕರಿಗೆ ಉಚಿತವಾಗಿ ಕಲರಿಂಗ ಮಾಡುತ್ತಿದ್ದಾರೆ. ಮಹಿಳೆಯರಿಗೂ ಕೂಡ ಪರಿಣಿತ ತಂಡದ ಮಹಿಳೆ ಸದಸ್ಯರೇ ಕಲರಿಂಗ ಮಾಡುತ್ತಿರುವುದು ವಿಶೇಷ. ಬಾಗಲಕೋಟೆಯಲ್ಲಿ ಮೊದಲದಿನ ಭಾರಿ ಸ್ಪಂದನೆ ವ್ಯಕ್ತವಾಯಿತು. ಸರದಿಯಲ್ಲಿ ನಿಂತಿ ಗ್ರಾಹಕರು ಹೇರ ಕಲರಿಂಗ್ ಮಾಡಿಸಿಕೊಂಡರು. ೨೫೦ ಕ್ಕೂ ಹೆಚ್ಚು ಜನ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಎರಡನೇ ಆ.೮ ರಂದು ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿರುವ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ರಸ್ತೆಯಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಉಚಿತ ಹೇರ ಕಲರಿಂಗ ಅಭಿಯಾನ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. ೮೭೪೭೮ ೮೮೭೫೮, ೮೮೮೪೪ ೩೨೩೦೭ ಸಂಪರ್ಕಿಸಬಹುದು.