ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

bkt-5-2 (1)
ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ
Published on

ಬಾಗಲಕೋಟೆ: ದೇಶದಲ್ಲೇ ಗಮನ ಸೆಳೆದಿರುವ ಬಾಗಲಕೋಟೆ ಆರ್‌ಎಸ್‌ಎಸ್ ಪಥ ಸಂಚಲನ ವಿಜಯದಶಮಿ ನಂತರದ ಮೊದಲ ಭಾನುವಾರ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಶತಮಾನದ ಸಂಭ್ರಮ ಹಿನ್ನಲೆಯಲ್ಲಿ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನವನ್ನು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.

ಆರ್‌ಎಸ್‌ಎಸ್ ನಗರ ವಾರ್ಷಿಕೋತ್ಸವ ಅಂಗವಾಗಿ ನಡೆದ ಪಥ ಸಂಚಲನಕ್ಕೆ ಇಡೀ ಬಾಗಲಕೋಟೆ ನಗರ ಮದುವಣಗಿತ್ತಿಯಂತೆ ಶೃಂಗಾಗೊAಡಿತ್ತು. ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಗಲ್ಲಿ ಗಲ್ಲಿಗಳಲ್ಲಿ ರಸ್ತೆ, ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಗಮನ ಸೆಳೆಯುತ್ತಿದ್ದವು. ಹಸಿರು ತೋರಣಗಳ, ಸ್ವಾಗತ ಕಟೌಟುಗಳು ಎಲ್ಲವೂ ಸೇರಿಕೊಂಡು ಹಬ್ಬದ ವಾತಾವರಣ ಸೃಷ್ಟಿಸಿತ್ತು.

ಸಂಜೆ ೪ ಗಂಟೆಗೆ ಸರಿಯಾಗಿ ಇಲ್ಲಿನ ಬಸವೇಶ್ವರ ಕಾಲೇಜು ಮೈದಾನದಿಂದ ಎರಡು ಮಾರ್ಗಗಳಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡರು. ಬಿಳಿ ಅಂಗಿ, ಖಾಕಿ ಪ್ಯಾಂಟ್, ತಲೆಗೆ ಟೋಪಿ, ಕೈಯಲ್ಲಿ ದಂಡ ಹಿಡಿದು ಗಜಗಾಂಭೀರ್ಯದ ಹೆಜ್ಜೆ ಹಾಕುತ್ತ ಸಾಗಿದರು. ಗಣವೇಶಧಾರಿಗಳ ಸಂಖ್ಯೆ ೫ ಸಾವಿರ ಗಡಿ ದಾಟಿತ್ತು.

ಕೋಟೆ ನಗರಿಯ ಪ್ರಮುಖ ರಸ್ತೆಗಳಲ್ಲಿ ಶಿಸ್ತಿನ ನಡಿಗೆ ನಡೆಸುತ್ತಿದ್ದರೆ, ರಸ್ತೆಯ ಎರಡು ಇಕ್ಕೇಲಗಳಲ್ಲಿ ನಿಂತಿದ್ದ ಜನಸೋಮ ಪುಷ್ಪಾರ್ಚನೆ ಮಾಡಿ ಸಂಭ್ರಮಸಿದರು. ಬೀದಿ ಬೀದಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ದೇಶಭಕ್ತರು, ಧಾರ್ಮಿಕ ಮುಖಂಡರು, ರಾಜ ಮಹಾರಾಜರು, ರಾಣಿಯರ ವೇಷಭೂಷಣ ಧರಿಸಿ, ಗಣವೇಶಧಾರಿಗಳಿಗೆ ಪುಷ್ಪ ಚಿಂಚನಗೈಯುತ್ತ ಸ್ವಾಗತಿಸುತ್ತಿದ್ದ ಪರಿ ಕಣ್ಮನ ಸೆಳೆಯಿತು.

ಪ್ರಸಿದ್ಧ ಬಾಗಲಕೋಟೆ ಆರ್‌ಎಸ್‌ಎಸ್ ಪಥ ಸಂಚಲನ ವೀಕ್ಷಣೆಗೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಮಾತ್ರವಲ್ಲದೇ ಸುತ್ತ ಮುತ್ತಲ ಗ್ರಾಮಗಳ, ವಿವಿಧ ನಗರ, ಪಟ್ಟಣಗಳಿಂದ ಆಗಮಿಸಿದ್ದ ಸಾವಿರಾರು ಜನರು ಚಪ್ಪಾಳೆ ತಟ್ಟುತ್ತ, ಘೋಷಣೆ ಕೂಗುತ್ತಿದ್ದರು. ಗಣವೇಶಧಾರಿಗಳ ಶಿಸ್ತುಬದ್ಧ ನಡೆಗೆ ಕಂಡು ಮೂಕವಿಸ್ಮಿತರಾದರು. ನಗರದ ಬಸವೇಶ್ವರ ವೃತ, ಕಾಲೇಜು ರಸ್ತೆ, ಸ್ಟೇಶನ್ ರಸ್ತೆ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಲ್ಲಿ ಸಂಘ ಪರಿವಾರದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣವೇಷಧಾರಿಗಳ ಜತೆಗೆ ತಾವುಗಳ ಕೂಡ ಪಥ ಸಂಚಲನ ಮಾರ್ಗದೂದ್ದಕ್ಕೂ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net