ಕೋಟೆನಗರಿಯಲ್ಲಿ ಅಖಂಡ ವೀಣಾ ಸಪ್ತಾಹ ಸಂಭ್ರಮ

bkt-22-3
ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೫೫ ರಲ್ಲಿರುವ ವಿಠ್ಠಲ ಕೃಷ್ಣ, ಚಿದಂಬರೇಶ್ವರ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಕರ್ಕಿಹಳ್ಳಿಯ ಸುರೇಶ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ವೀಣಾ ಸಪ್ತಾಹ.
Published on

ಬಾಗಲಕೋಟೆ: ಸಂತ ಶ್ರೇಷ್ಠ ಸುರೇಶ ಮಹಾರಾಜರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ೧೦೬ ನೇ ಅಖಂಡ ವೀಣಾ ಸಪ್ತಾಹ ಕಾರ್ಯಕ್ರಮ ಸಂಭ್ರಮ, ಸಡಗರದಿಂದ ಜರುಗುತ್ತಿದ್ದು, ಆಧ್ಯಾತ್ಮಿಕ ಸಂದೇಶ ಸಾರಿ ಹೇಳುತ್ತಿದೆ.

ನವನಗರದ ಸೆಕ್ಟರ್ ನಂಬರ್ ೫೫ ರಲ್ಲಿರುವ ವಿಠ್ಠಲ ಕೃಷ್ಣ, ಚಿದಂಬರೇಶ್ವರ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಕರ್ಕಿಹಳ್ಳಿಯ ಸುರೇಶ ಮಹಾರಾಜರ ಅವರ ಸಮ್ಮುಖದಲ್ಲಿ ನಿತ್ಯವು ಶಿವ ಚಿದಂಬರ ನಾಮಸ್ಮರಣೆ, ಪ್ರವಚನ, ಸತ್ಸಂಗದಲ್ಲಿ ಅಪಾರ ಭಕ್ತ ಸಮೂಹ ಭಾಗವಹಿಸಿ ಪುನೀತರಾದರು. ಕೈಯಲ್ಲಿ ವೀಣಾ ಹಿಡಿದು ಅಹೋರಾತ್ರಿ ಚಿದಂಬರ ನಾಮಸ್ಮರಣೆ ಮಾಡುತ್ತಾ ಆಧ್ಯಾತ್ಮದ ಚಿಂತನ ಹರಿಸಿದರು.

ಬೆಳಗ್ಗೆ ಪೂಜೆ, ಕಾಕಡಾರತಿ, ನಾಮ ಜಪ, ಜ್ಞಾನ ಯಜ್ಞ, ಗಣಪತಿ ಹೋಮ, ಲಿಲಿತಾ ಸಹಸ್ರಾನಾಮ, ರುದ್ರ ಹೋಮ, ಚಿದಂಬರೇಶ್ವರ ಸ್ವಾಮಿಗೆ ಬುತ್ತಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಗಮನ ಸೆಳೆದವು. -ೆ.೨೩ ರಂದು ಕಾಕಡಾರತಿ ಅಖಂಡ ವೀಣಾ ಮಂಗಲ, ಆರತಿ, ನೈವೇದ್ಯ ಮಹಾಪ್ರಸಾದದೊಂದಿಗೆ ಸಪ್ತಾಹವು ಮಂಗಳಗೊಳ್ಳಲಿದೆ.

ಕಣ್ವ ಮಠಾಽÃಶರಾದ ವಿದ್ಯಾಕಣ್ಣವಿರಾಜ ತೀರ್ಥ ಸ್ವಾಮೀಜಿ, ಚರಂತಿಮಠದ ಪ್ರಭು ಸ್ವಾಮೀಜಿ, ಚಿದಂರೇಶ್ವರ ಮೂಲ ಸಂಸ್ಥಾನದ ಬ್ರಹ್ಮಶ್ರೀ ದಿವಾಕರ ದೀಕ್ಷಿತರು ಸೇರಿದಂತೆ ನಾಡಿನ ವಿವಿಧ ಮಠಾಽÃಶರು ಭಾಗವಹಿಸಿ ಅನುಗ್ರಹ ಸಂದೇಶ ನೀಡಿದರು. ಬಿಂಧು ಮಾಧವಾಚಾರ್ಯ ನಾಗಸಂಪಗಿ, ಅರುಣ ದೇಸಾಯಿ, ವಿಜಯ ಚಟ್ಟರಕಿ, ರಾಜರಾಮ ಜೋಶಿ, ಶಂಕರ ಬೋಕರೆ, ಎನ್.ಬಿ.ಆಲೂರ, ಪ್ರಮೋದ ಜೋಶಿ, ಬ್ರಹ್ಮಾನಂದ ದೇಸಾಯಿ ಇತರರು ನೇತೃತ್ವ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net