ಕೋಟೆ ಸರ್ಕಾರಿ ಶಾಲೆ ಮಕ್ಕಳ ಜಾಥಾ

14blrp4
Published on

ಬೇಲೂರು: ಸ್ವಾತಂತ್ರ್ಯ ದಿನಾಚರಣೆ ಹಾಗೂ ಹರ್ ಘರ್ ತಿರಂಗಾ ಅಂಗವಾಗಿ ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬುಧವಾರ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.

ಶಿಕ್ಷಕ ಕೆ.ಬಿ.ಮಾರುತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟದ ಪ್ರಾಮುಖ್ಯತೆ ತಿಳಿಸಲು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಲು ಜಾಥಾ ನಡೆಸಲಾಗುತ್ತಿದೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಮೌಲ್ಯಗಳನ್ನು ದೇಶದ ಪ್ರತಿಯೊಬ್ಬರು ಮೈಗೂಡಿಸಿಕೊಂಡು ಭವ್ಯ ಭಾರತ ಕಟ್ಟಬೇಕು ಎಂದರು.

ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಮುಖ್ಯ ಶಿಕ್ಷಕಿ ಪಾರ್ವತಿ, ಶಿಕ್ಷಕರಾದ ಭಾಗ್ಯಲತಾ, ಶಕುಂತಲಾ, ಪಲ್ಲವಿ, ಲತಾ, ಕುಮುದಾ, ಆಶಾ, ಮಂಜುನಾಥ್, ಬೋರೇಶ, ದಿವ್ಯಾ, ಗೀತಾ, ಇಂದಿರಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net