

ಬಾಗಲಕೋಟೆ: ತಾಯಿ ಭಾಷೆ ಕನ್ನಡ. ಅದನ್ನು ಮರೆಯಬೇಡಿ. ಎಲ್ಲಿಯೇ ಇದ್ದರು ನಿತ್ಯ ಜೀವನದಲ್ಲಿ ಬಳಕೆ ಮಾಡಿ. ನಮ್ಮ ನೆಲದ ಸಂಸ್ಕೃತಿ, ಬಂಧುತ್ವ ನಮ್ಮೂಳಗೆ ಬೆಳೆಸುತ್ತದೆ. ಇಂದಿನ ವ್ಯವಹಾರಿಕವಾಗಿ ಭಾಷೆಯಾಗಿ ಇಂಗ್ಲಿಷ್ ಬೇಕು. ಅದನ್ನು ಕಲಿತುಕೊಳ್ಳಬೇಕು. ಕನ್ನಡ, ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿ. ಭಾಷೆಗಳು ಮಹತ್ವ ಪಡೆದುಕೊಂಡಿದೆ ಎಂದು ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ, ಖ್ಯಾತ ಲೇಖಕಿ ಡಾ.ಸುಧಾ ಮೂರ್ತಿ ಹೇಳಿದರು.
ನಗರದ ತೇಜಸ್ ಇಂಟರನ್ಯಾಷನಲ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹಲವು ವಿಷಯಗಳ ಕುರಿತು ಮುಕ್ತವಾಗಿ ಪ್ರಸ್ತಾಪ ಮಾಡಿದರು. ಶ್ರೀಕೃಷ್ಣನಿಗೆ ಹೆತ್ತ, ಸಾಕು ತಾಯಿ ಇಬ್ಬರು. ಇವರಲ್ಲಿ ಯಾರು ಮುಖ್ಯ ಎನ್ನುವುದಕ್ಕಿಂತ ಕೃಷ್ಣನನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ದೇವಿಕಾ, ಯಶೋಧಾ ಇಬ್ಬರು ತಾಯಂದಿರು ಅಷ್ಟೆ ಮಹತ್ವ ಪಡೆದುಕೊಂಡಿದೆ. ಆದ್ದರಿಂದ ಕನ್ನಡ, ಇಂಗ್ಲಿಷ್ ಭಾಷೆಯ ಬಗ್ಗೆ ತಾತ್ಸಾರ ಸಲ್ಲ ಎಂದರು.
ನಾನು ಇಂಜನಿಯಿರಿಂಗ್, ಇಂಜನಿಯರಿಂಗ್ ಬಿಟ್ಟು ಹೊಲಮನೆ ಕೆಲಸ ಮಾಡಬೇಕಿತ್ತು. ಟ್ರ‍್ಯಾಕ್ಟರ ಓಡಿಸೋದು, ಹೊಲದಲ್ಲಿ ಕಳೆ ತೆಗೆಯೋದು ಸೇರುತ್ತದೆ. ನಾನು ಗ್ರೇಟ್ ಮಿಸ್ಟೇಕ್ ಅಂತ ಯಾವುದು ಮಾಡಿಲ್ಲ. ಒಮ್ಮೊಮ್ಮೆ ನನಗೆ ಅನ್ನಿಸಿದ್ದು ಕೋಟಿ ವಿದ್ಯಗಿಂತ ಮೇಟಿ ವಿದ್ಯ ಮೇಲು ಅಂತ. ಶಿಕ್ಷಕಿ ಹುದ್ದೆ ಅಂದ್ರೆ ಬಹಳ ಇಷ್ಟ. ನನಗೆ ಪೃಕೃತಿ ಜೊತೆಗೆ ಇರಲು ಬಹಳ ಇಷ್ಟ. ಮಿಸ್ಟೇಕ್ ಅಂತ ಮಾಡಿದ್ದು ನೆನಪಿಗೆ ಬರ್ತಿಲ್ಲ. ಜೀವನದಲ್ಲಿ ಇದನ್ನು ಮಾಡಲೇಬಾರದಿತ್ತು ಅಂತ ಇವತ್ತಿಗೂ ಅನ್ನಿಸಿಲ್ಲ ಎಂದರು.
ನೀವು ರಾಷ್ಟ್ರಪತಿ ಆಗಬೇಕಿತ್ತು.: ನೀವು ನಮ್ಮ ದೇಶದ ರಾಷ್ಟ್ರಪತಿ ಆಗಬೇಕಿತ್ತು ಅಂತ ಮಕ್ಕಳ ಜೊತೆ ಸಂವಾದ ನಡೆಸಿದ ಸುಧಾಮೂರ್ತಿಗೆ ಶಾಲಾ ಮುಖ್ಯಸ್ಥೆ ಮಾಧುರಿ ಮುಧೋಳ ಹೇಳಿದರು. ನಗುತ್ತಲೆ ಉತ್ತರಿಸಿದ ಅವರು, ಈಗ ನಾನು ಆರಾಮ ಇದ್ದೀನಿ. ನಾನು ಆರಾಮ ಇರೋದು ಬೇಡ್ವಾ ಎಂದು ಮರು ಪ್ರಶ್ನಿಸಿದರು ಸುಧಾಮೂರ್ತಿ. ಏನು ಬೇಡ ನಾನು ನಮ್ಮ ಊರಾಗ ಆರಾಮ ರಾಣಿ ಇದ್ದಂಗ ಅದಿನಿ ಎಂದು ಕೈಮುಗಿದರು. ಮತ್ತೆ ಮಾತು ಮುಂದುವರೆಸಿದ ಮಾಧುರಿ ಮುಧೋಳ, ನಾವು ಎಲ್ಲರೂ ಏನು ಪ್ರಾರ್ಥನೆ ಮಾಡುತ್ತೇವೆ ಅಂದರೆ ಬರುವ ದಿನದಲ್ಲಿ ನೀವು ನಮ್ಮ ದೇಶದ ರಾಷ್ಟ್ರಪತಿ ಆಗಬೇಕು. ನೀವು ಆರಾಮ ಅದಿರಿ ದೇಶ ಕೂಡ ಅರಾಮ ಇರಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ವಿ.ಪ ಸದಸ್ಯ ಹನಮಂತ ನಿರಾಣಿ, ಅಬ್ದುಲ್ ಕಲಾಂ ನಂತರ ನೀವು ನಮಗೆ ಬೇಕು ಎಂದರು.
ಈ ಸಂದರ್ಭದಲ್ಲಿ ತೇಜಸ್ ಇಂಟನ್ಯಾಷನ್ ಶಾಲೆಯ ಅಧ್ಯಕ್ಷೆ ಮಾಧುರಿ ಮುಧೋಳ, ವಿ.ಪ ಸದಸ್ಯ ಹನುಮಂತ ನಿರಾಣಿ, ನಿವೃತ್ತ ಐಎಎಸ್ ಅಧಿಕಾರಿ ಎಂ.ಎಚ್.ಡ್ಯಾಬೇರಿ, ಪ್ರಾಚಾರ್ಯ ಸಚಿನ್ ಬಾತ್ರಾ, ಡಾ.ಶಿವಕುಮಾರ ಗಂಗಲ್ ಸೇರಿದಂತೆ ಇತರರು ಇದ್ದರು.