ಕೋವಿಡ್ ಪರೀಕ್ಷೆಯ ಜಾಗೃತಿ ಮೂಡಿಸಿ

carona logo
Published on

ಕಾರವಾರ: 60 ವರ್ಷ ಮೆಲ್ಪಟ್ಟವರು, ಮಧುಮೇಹ, ರಕ್ತದೊತ್ತಡ ಇದ್ದವರು ಹಾಗೂ ಗರ್ಭಿಣಿಯರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದು ತಹಸೀಲ್ದಾರ್ ಆರ್.ವಿ. ಕಟ್ಟಿ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ತಾಲೂಕಿನ ವಿವಿಧ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಕೋವಿಡ್ ತಗಡೆಗಟ್ಟಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಓ, ಗ್ರಾಮಲೆಕ್ಕಾಧಿಕಾರಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿಯ ಕಾರ್ಯಪಡೆ ಸಮಿತಿ ರಚಿಸಬೇಕು ಎಂದರು. ನಗರ ಪ್ರದೇಶದಲ್ಲಿ ನಗರಸಭೆ ಅಧಿಕಾರಿಗಳನ್ನು ಸೇರಿಸಿಕೊಳ್ಳಬೇಕು ಎಂದರು. ತಾಪಂ ಇಒ ಆನಂದಕುಮಾರ ಬಾಲಣ್ಣನವರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸೂರಜಾ ನಾಯಕ, ಸಿಪಿಐ ಸಂತೋಷ ಶೆಟ್ಟಿ ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net