ಕೋವಿಡ್ 19 ಪರಿಹಾರ ನಿಧಿಗೆ 1 ಲಕ್ಷ ರೂ. ನೆರವು

05 rtl 01
Published on

ರಟ್ಟಿಹಳ್ಳಿ: ಪಟ್ಟಣದ ನಿವೃತ್ತ ಶಿಕ್ಷಕಿ ರೇಣುಕಾ ಶಂಭಣ್ಣ ಗೂಳಪ್ಪನವರ ಅವರು ತಮ್ಮ ನಾಲ್ಕು ತಿಂಗಳ ಪಿಂಚಣಿ 1 ಲಕ್ಷ ರೂ.ಗಳ ಚೆಕ್ ಅನ್ನು ತಹಸೀಲ್ದಾರ್ ಕೆ.ಗುರುಬಸವರಾಜ ಮೂಲಕ ಮುಖ್ಯಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ ಭಾನುವಾರ ಹಸ್ತಾಂತರಿಸಿದರು.

ಬಳಿಕ ಮಾತನಾಡಿ, ಸರ್ಕಾರದ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂದರು.

ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ನಿವೃತ್ತ ಶಿಕ್ಷಕಿ ರೇಣುಕಾ ಗೂಳಪ್ಪನವರ ಅವರ ಸಾಮಾಜಿಕ ಸೇವೆ ಕಾರ್ಯ ಶ್ಲಾಘನೀಯ. ಸಹಾಯ ಮಾಡಲು ಇಚ್ಛಿಸುವವರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಬಹುದು ಎಂದರು.

ಮಾಸ್ಕ್ ವಿತರಣೆ, ಊಟದ ವ್ಯವಸ್ಥೆ

ಕೃಷಿ ಸಚಿವ ಬಿ.ಸಿ. ಪಾಟೀಲರ ಪುತ್ರಿ ಸೃಷ್ಟಿ ಪಾಟೀಲ ಅವರು ತಮ್ಮ ಜನ್ಮದಿನಾಚರಣೆ ನಿಮಿತ್ತ ಪಟ್ಟಣದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಸಿಬ್ಬಂದಿಗೆ, ಗ್ರಾ.ಪಂ. ಮತ್ತು ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಿಸಿದರು. ಅಲ್ಲದೆ, ಎಲ್ಲ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿ, ಅಲೆಮಾರಿ ಜನಾಂಗದವರಿಗೆ ಬಟ್ಟೆ ವಿತರಿಸಿದರು.

ನಂತರ ಮಾತನಾಡಿದ ಅವರು, ಕರೊನಾ ವೈರಸ್ ತಡೆಗಟ್ಟುವಿಕೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅಧಿಕಾರಿಗಳು ಕರೊನಾ ವೈರಸ್ ತಡೆಗಟ್ಟಲು ಅನೇಕ ಕ್ರಮ ಕೈಗೊಳ್ಳುತ್ತಿದ್ದಾರೆ. ಅವರ ಎಲ್ಲ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಬೇಕಾಗಿದೆ ಎಂದರು.

ವರ್ತಕ ಶಂಭಣ್ಣ ಗೂಳಪ್ಪನವರ, ಸುಜಯ್ ಬೇಲೂರ, ಗಣೇಶ ವೆರ್ಣಿಕರ, ರಾಜು ವೆರ್ಣಿಕರ, ಗ್ರಾ.ಪಂ. ಸದಸ್ಯರಾದ ಬಸವರಾಜ ಆಡಿನವರ, ಶಂಕ್ರುಗೌಡ ಚೆನ್ನಗೌಡ್ರ, ವೀರಣಗೌಡ್ರ ಮಕರಿ, ಶಿವರಾಜ ಗೂಳಪ್ಪನವರ, ರಾಜು ಬೋಗಾರ, ಮುರುಳಿ ಬಾಜೀರಾಯರ್, ವೈದ್ಯಾಧಿಕಾರಿ ಪುಷ್ಪ ಬಣಗಾರ ಆರೋಗ್ಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net