ಕಲಬುರಗಿ: ಆಳಂದ ತಾಲೂಕಿನ ಕರಹರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡುವ ಉದ್ದೇಶಕ್ಕೆ ಹಲ್ಲೆ ಮಾಡಿ, ಗಂಭೀರ ಗಾಯಗೊಳಿಸಿದ ಅಪರಾಧಿಗಳಿಗೆ ಮೂರು ವರ್ಷ ಕಠಿಣ ಜೈಲು ಶಿೆ, 82 ಸಾವಿರ ರೂ. ದಂಡ ವಿಧಿಸಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಆದೇಶಿಸಿದ್ದಾರೆ.
ಯಶ್ವಂತರಾಯ ಕಾಳೆ, ಅಂಬಾಜಿ ಕಾಳೆ, ಅನೀಲಕುಮಾರ ಕಾಳೆ, ಅರುಣಕುಮಾರ ಕಾಳೆ ಶಿೆಗೆ ಒಳಗಾದ ಅಪರಾಧಿಗಳು. ಕರಹರಿ ಗ್ರಾಮದಲ್ಲಿ ಕರಹರಿ ಗ್ರಾಮದ ಸಿದ್ದರಾಮ ಮೂಲಗೆ, ಶ್ರೀಮಂತರಾವ ಮೂಲಗೆ, ಮಹಾದೇವ ಅವರು ಕಮಲಾನಗರ ಗ್ರಾಮಕ್ಕೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಮರಳುವಾಗ ಹಲ್ಲೆ ನಡೆಸಲಾಗಿತ್ತು. ಈ ಕುರಿತು ನರೋಣಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪಿಎಸ್ಐ ಉದ್ದಂಡಪ್ಪ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಚಾರನೆ ನಡೆಸಿದ ನ್ಯಾಯಾಧೀಶರು ಶಿೆ ವಿಧಿಸಿ ಆದೇಶಿಸಿದ್ದಾರೆ. ಗಾಯಾಳುಗಳಾದ ಶ್ರೀಮಂತರಾಯ, ನಾಗೇಂದ್ರಪ್ಪಗೆ ತಲಾ 30 ಸಾವಿರ, ಸಿದ್ರಾಮ್ಗೆ 10 ಸಾವಿರ ಪರಿಹಾರ ನೀಡಿ, ತೀರ್ಪು ನೀಡಿದ್ದಾರೆ. ಸರ್ಕಾರದ ಪರ 3ನೇ ಅಪರ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ವಾದಿಸಿದ್ದರು.