

ಬಾಗಲಕೋಟೆ: ಮಗಳೊಂದಿಗೆ ಸಲುಗೆಯಿಂದ ವರ್ತಿಸಿದ ಕಾರಣಕ್ಕೆ ಕೊಲೆ ಮಾಡಿದ ಅಪರಾಽಗಳು ಇಬ್ಬರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಎನ್.ವಿ.ವಿಜಯ ಜೀವಾವಽ ಶಿಕ್ಷೆ, ೫ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬಾದಾಮಿ ತಾಲೂಕಿನ ಹಂಗರಗಿ ಗ್ರಾಮದವರಾದ ಮಲ್ಲಿಕಾರ್ಜುನ ಭೊಮಣ್ಣ ಗಾಣಿಗೇರ, ಹನುಮಂತ ನಾಗಪ್ಪ ಗಾಣಿಗೇರ ಜೀವಾವಽ ಶಿಕ್ಷೆಗೆ ಗುರಿಯಾದ ಅಪರಾಽಗಳು. ಮಲ್ಲಿಕಾರ್ಜುನ ಗಾಣಿಗೇರ ಅವರ ಮಗಳೊಂದಿಗೆ ಹೂಳಿಯಪ್ಪ ಹನುಮಪ್ಪ ಗಾಣಿಗೇರ ಸಲುಗೆಯಿಂದ ವರ್ತಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಮಲ್ಲಿಕಾರ್ಜುನ ಗಾಣಿಗೇರ, ಹನುಮಂತ ಗಾಣಿಗೇರ ಜೊತೆಗೆ ಹೊಸ ವರ್ಷದ ಪಾರ್ಟಿ ಮಾಡುವ ನೆಪದಲ್ಲಿ ತೋಟಕ್ಕೆ ಕರೆಯಿಸಿ ಹೂಳಿಯಪ್ಪ ಗಾಣಿಗೇರ ಅವರನ್ನು ಕೊಲೆ ಮಾಡಿದ್ದರು. ೨೦೨೦ ಡಿಸೆಂಬರ್ ೩೧ ರಂದು ಘಟನೆ ನಡೆದಿತ್ತು.
ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸಿಪಿಐ ರಮೇಶ ಹಾನಾಪುರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಜೀವಾವಽ ಶಿಕ್ಷೆ, ೫ ಸಾವಿರ ರೂ. ದಂಡ ವಿಽಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.