ಕೊಲೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ

42c79777-755a-4757-ba9d-1517bf9013b2 (1)
Published on

ಬಾಗಲಕೋಟೆ: ಸರಾಯಿ ಕುಡಿಸು ಅಂತ ಕಾಡಿಸಿದ್ದರ ಸಿಟ್ಟಿನಿಂದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ಐದು ಸಾವಿರ ದಂಡ ವಿಽಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ ಶನಿವಾರ ತೀರ್ಪು ನೀಡಿದ್ದಾರೆ.

ರವಿ ಕನಕಪ್ಪ ಪಾತ್ರೋಟಿ ಶಿಕ್ಷೆಗೆ ಗುರಿಯಾದ ಅಪರಾಧ. ಬೀಳಗಿ ನಿವಾಸಿಯಾಗಿದ್ದು, ಬಾಡಗಂಡಿ ಗ್ರಾಮದ ಸರಹದ್ದಿನಲ್ಲಿರುವ ಪ್ಲಾಟನಲ್ಲಿ ಕಮಲಾಕ್ಷಿ ಗೌಡರ ಎನ್ನುವವರ ಮನೆಯಲ್ಲಿ ಚಂದ್ರಪ್ಪ ನಿಜಲಿಂಗಪ್ಪ ಬಣ್ಣಪವರ ಇತನು ಸರಾಯಿ ಕುಡಿಸು ಅಂತ ಪೀಡಿಸಿದ್ದನು. ಇದರಿಂದ ಕೋಪಗೊಂಡು ರವಿ ಪಾತ್ರೋಟಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು. ಈ ಬಗ್ಗೆ ಚಂದ್ರಪ್ಪ ಬಣ್ಣಪನವರ ಪತ್ನಿ ಶರಣವ್ವ ದೂರು ನೀಡಿದ್ದಳು. ಬೀಳಗಿ ಪೊಲೀಸ್ ಠಾಣೆಯಲ್ಲಿ ೨೦೨೨ ಡಿಸೆಂಬರ್ ೮ ಪ್ರಕರಣ ದಾಖಲಾಗಿತ್ತು. ತನಿಖಾಽಕಾರಿ ಶಿವಾನಂಂದ ಕಮತಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಽÃಶ ಎನ್.ವಿ.ವಿಜಯ ಆಪಾಧನೆ ರುಜುವಾತು ಆದ ಹಿನ್ನಲೆಯಲ್ಲಿ ಜೀವಾವಽ ಶಿಕ್ಷೆ, ೫ ಸಾವಿರ ದಂಡ ವಿಽಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net