ಕೆ.ಆರ್.ಸಾಗರ: ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಕೊಲೆ ಆರೋಪಿಗೆ ಶ್ರೀರಂಗಪಟ್ಟಣದ 3ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೊಸ್ನಾ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ.
ಶರತ್ ಕುಬೇರ ಶಿಕ್ಷೆಗೆ ಒಳಗಾದವ. 2022ರ ಜು.27 ರಂದು ಬೆಳಗೊಳ ಗ್ರಾಮದ ವೈನ್‌ಸ್ಟೋರ್ ಮುಂಭಾಗ ಬೆಳಗೊಳ ಗ್ರಾಮದ ರವಿ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಶರತ್ ಕುಬೇರ ಕೊಲೆ ಮಾಡಿದ್ದ. ಪ್ರಕರಣ ಸಂಬಂಧ ಕೆ.ಆರ್.ಸಾಗರ ಪೊಲಿಸ್ ಠಾಣೆಯ ಅಂದಿನ ಪಿಎಸ್‌ಐ ಲಿಂಗರಾಜು ದೂರು ದಾಖಲಿಸಿದ್ದರು. ನಂತರ ಸಿಪಿಐ ಯೋಗೇಶ್ ಪ್ರಕರಣದ ತನಿಖೆ ನಡೆಸಿ ಚಾರ್ಜ್‌ಸೀಟ್ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜು.22ರಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.
ಸರ್ಕಾರಿ ಆಭಿಯೋಜಕರಾಗಿ ಪ್ರಪುಲ್ಲಾ ವಾದ ಮಂಡಿಸಿದ್ದರು.